ಮಡಿಕೇರಿ, ಜ.೧೦: ಕೊಡಗು ಗೌಡ ವಿದ್ಯಾ ಸಂಘ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವು ತಾ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ಕೊಡಗು ಗೌಡ ಸಮಾಜದಲ್ಲಿ ನಡೆಯಲಿದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ಸೋಮವಾರಪೇಟೆ ಸಾಂದೀಪನಿ ಪ್ರೌಢಶಾಲೆಯ ಅಧ್ಯಕ್ಷ ಮೂಡಗದ್ದೆ ದಾಮೋದರ, ಕೊಡಗು ಗೌಡ ಸಮಾಜದ ಗೌರವ ಕಾರ್ಯದರ್ಶಿ ಕೋಳುಮುಡಿಯನ ಆರ್.ಅನಂತ್ ಕುಮಾರ್, ರ‍್ವತ್ತೋಕ್ಲು ಕಾಫಿ ಬೆಳೆಗಾರರಾದ ತಳೂರು ಮುತ್ತಮ್ಮ ರಾಜಗೋಪಾಲ, ಮದೆನಾಡು ನಿವೃತ್ತ ಮುಖ್ಯೋಪಾಧ್ಯಾಯ ಬಾರಿಯಂಡ ಜೋಯಪ್ಪ, ಕಾಫಿ ಮಂಡಳಿ ನಿವೃತ್ತ ಸಂಪರ್ಕಾಧಿಕಾರಿ ಬಾರಿಕೆ ಎನ್.ಅಯ್ಯಪ್ಪ ಇತರರು ಪಾಲ್ಗೊಳ್ಳಲಿದ್ದಾರೆ.