ಮಡಿಕೇರಿ, ಜ. ೧೦: ನಗರದ ಮಹದೇವಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ವೆಂಕಟೇಶ್ವರ ಸ್ವಾಮಿಗೆ ವಿಶೇಷಪೂಜೆ, ಸೇವೆಯೊಂದಿಗೆ ತುಳಸಿ ಅರ್ಚನೆ, ಕುಂಕುಮಾರ್ಚನೆ, ವಿವಿಧ ಅಭಿಷೇಕ ಸೇವೆಗಳು ನಡೆದವು. ಸಂಜೆ ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.