ಮಡಿಕೇರಿ, ಜ. ೧೦: ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು, ಸಂಸ್ಕೃತಿ ಸಿರಿ ಬಳಗ ಹಾಗೂ ಟ್ರಸ್ಟ್ ಕೊಡಗು, ಯಶೋಧ ರಂಗ ಟ್ರಸ್ಟ್ ಬೆಟ್ಟದಳ್ಳಿ ಸಹಯೋಗದಲ್ಲಿ ನಿರ್ದಿಗಂತ ಪ್ರಸ್ತುತಪಡಿಸುವ ಶಕೀಲ್ ಅಹಮದ್ ಪರಿಕಲ್ಪನೆ ಹಾಗೂ ನಿರ್ದೇಶನದ ಒಂದು ಗಂಟೆ ಅವಧಿಯ ನಾಟಕ ‘ತಿಂಡಿಗೆ ಬಂದ ತೊಂಡೇರಾಯ’ ತಾ. ೧೩ರ ಸಂಜೆ ೬.೩೦ ಗಂಟೆಗೆ ಮಡಿಕೇರಿಯ ಪೊಲೀಸ್ ಮೈತ್ರಿ ಭವನದಲ್ಲಿ ಉಚಿತವಾಗಿ ಪ್ರದರ್ಶನಗೊಳ್ಳಲಿದೆ.