ಗೋಣಿಕೊಪ್ಪಲು, ಜ.೨೨: ಆಗಿನ್ನು ಬೆಳಗ್ಗಿನ ೯ರ ಸಮಯ; ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ತಮ್ಮ ಮನೆಯಿಂದ ಅರಣ್ಯ ಕಚೇರಿಗೆ ಆಗಮಿಸುತ್ತಿದ್ದರು. ಕಚೇರಿಯ ಬೀಗ ತೆಗೆಯುತ್ತಿ ದ್ದಂತೆಯೇ ಸಮೀಪದ ಅರಣ್ಯ ಪ್ರದೇಶದಿಂದ ಒಂಟಿ ಸಲಗವೊಂದು ಕಚೇರಿಯ ಬಳಿ ಧಾವಿಸಿ ಬಂದಿತು. ಈ ದಿಢೀರ್ ಘಟನೆಯಿಂದ ಅರಣ್ಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕೆಲ ಕಾಲ ದಿಗ್ಭçಮೆಗೊಂಡರು.
ಘಟನೆಯಿAದ ಭಯಗೊಂಡ ಇವರು ಒಂದೇ ಸಮನೆ ಬೊಬ್ಬೆ ಹಾಕಿದರು. ಈ ಘಟನೆಯು ತಿತಿಮತಿ ಅರಣ್ಯ ಇಲಾಖೆಯ ಆವರಣದಲ್ಲಿ ಮುಂಜಾನೆ ನಡೆದಿದೆ. ಗಾಬರಿಗೊಂಡ ಕಾಡಾನೆಯು ಏಕಾಏಕಿ ದಿಕ್ಕು ತಪ್ಪಿ ಸಮೀಪದ ತಿತಿಮತಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಓಡಲಾ ರಂಭಿಸಿದೆ.
ತಿತಿಮತಿ ಅರಣ್ಯ ಇಲಾಖೆಯ ಆರ್ಆರ್ಟಿ ತಂಡದ ಸಿಬ್ಬಂದಿಗಳು ತಮ್ಮ ಬಂದೂಕನ್ನು ಕೈಗೆತ್ತಿಕೊಂಡು ಆನೆಯ ಹಿಂದೆಯೇ ಓಡಲಾರಂಭಿಸಿ ದರು. ಕಾಡಾನೆ ಕೂಡ ಜನರನ್ನು ಕಂಡು ಗಾಬರಿಯಿಂದ ಓಡುತ್ತಿತ್ತು. ಮುಖ್ಯ ರಸ್ತೆಯಲ್ಲಿ ನಾಗರಿಕರು ಓಡಾಡುತ್ತಿದ್ದಂತೆಯೇ ಇನ್ನೊಂದೆಡೆ ವಾಹನಗಳು ಒಂದೆ ಸಮನೆ ಅತ್ತಿಂದಿತ್ತ ಸಂಚರಿಸುತ್ತಿದ್ದವು.
ಸಮಯ ಪ್ರಜ್ಞೆ ತೋರಿದ ಕೆಲ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂಜಾಗೃತಾ ಕ್ರಮವಾಗಿ ತಮ್ಮ ಬೈಕಿನಲ್ಲಿ ತೆರಳಿ ಅಡ್ಡ ರಸ್ತೆಯಿಂದ ಮುಖ್ಯ ರಸ್ತೆಗೆ ಆಗಮಿಸುವ ಸಾರ್ವಜನಿಕರನ್ನು ತಡೆಯುವಲ್ಲಿ ಯಶಸ್ವಿಯಾದರು.
ತಿತಿಮತಿ ಅರಣ್ಯ ಪ್ರವಾಸಿ ಮಂದಿರದ ಆವರಣದಿಂದ ಆಗಮಿಸಿದ ಕಾಡಾನೆಯು ಸಮೀಪದ ಅರಣ್ಯ
(ಮೊದಲ ಪುಟದಿಂದ) ಇಲಾಖೆಯ ಕಚೇರಿಗೆ ನುಗ್ಗಿ ನಂತರ ಮುಖ್ಯ ರಸ್ತೆಗೆ ತೆರಳಿದೆ. ಸುಮಾರು ೩೦೦ ಮೀಟರ್ ದೂರದವರೆಗೂ ಮುಖ್ಯ ರಸ್ತೆಯಲ್ಲಿ ಒಂದೇ ಸಮನೇ ಓಡಿದ ಒಂಟಿ ಸಲಗವು ಚೈನ್ಗೇಟ್ ಬಳಿಯ ರಸ್ತೆಗೆ ತೆರಳಿದೆ. ಈ ರಸ್ತೆಗೆ ತೆರಳುತ್ತಿದ್ದಂತೆಯೇ ಅರಣ್ಯ ಸಿಬ್ಬಂದಿಗಳು ತಮ್ಮ ವಾಹನದಲ್ಲಿ ತೆರಳಿ ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ಆರ್ಟಿ ತಂಡದ ಅಧಿಕಾರಿಗಳಾದ ಉಮಾಶಂಕರ್ ಹಾಗೂ ತಂಡ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಎದುರಾಗದ ರೀತಿಯಲ್ಲಿ ಸುಮಾರು ೧ ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಒಂಟಿ ಸಲಗವನ್ನು ಅರಣ್ಯ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯನ್ನು ನಾಗರಿಕರು ಪ್ರಶಂಸಿಸಿದ್ದಾರೆ.
ಚಿತ್ರ ಸುದ್ದಿ, ಹೆಚ್.ಕೆ. ಜಗದೀಶ್, ದಿನೇಶ್ ಎನ್.ಎನ್.