ಕಣಿವೆ, ಜ. ೨೨: ಇಲ್ಲಿನ ರಾಷ್ಟಿçÃಯ ಹೆದ್ದಾರಿಯ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶ್ರೀಗಳ ಆರನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ಕಾರ್ಯಕ್ರಮ ಮಂಗಳವಾರ ನಡೆಯಿತು.

ದಿನದ ಅಂಗವಾಗಿ ಶ್ರೀಗಳ ವೃತ್ತವನ್ನು ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜುನ ಮಾತನಾಡಿ, ಎಲ್ಲರೂ ಶಿವಕುಮಾರ ಸ್ವಾಮೀಜಿ ಆದರ್ಶಗಳನ್ನು ಪಾಲಿಸಬೇಕೆಂದರು. ಮುಖ್ಯ ಅತಿಥಿಯಾಗಿದ್ದ ಶ್ರೀ ಸಿದ್ದಗಂಗಾ ಭಕ್ತಮಂಡಳಿ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಸಿದ್ದಗಂಗಾ ಕ್ಷೇತ್ರ ಇಡೀ ನಾಡಿನ ಪರಮ ಪುಣ್ಯಕ್ಷೇತ್ರವಾಗಿದ್ದು, ಡಾ. ಶಿವಕುಮಾರ ಸ್ವಾಮೀಜಿ ಎಲ್ಲಾ ಕಾಲಕ್ಕೂ ಪ್ರಾತಃ ಸ್ಮರಣೀಯರಾಗಿ ಉಳಿಯಲಿದ್ದಾರೆ ಎಂದರು.

ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷ ಪ್ರವೀಣ್, ಪಿಡಿಓ ಸುಮೇಶ್, ಸದಸ್ಯರಾದ ಲಕ್ಷö್ಮಣ್, ನಾರಾಯಣ್, ಭಕ್ತಮಂಡಳಿ ಸಂಚಾಲಕ ಬಿ. ನಟರಾಜು, ಗುಡ್ಡೆಹೊಸೂರು ವೀರಶೈವ ಸಮಾಜದ ಕಾರ್ಯದರ್ಶಿ ದ್ರಾಕ್ಷಾಯಿಣಿ, ನಿರ್ದೇಶಕರಾದ ಶುಭಶೇಖರ್, ಕಾಶಿ, ಶೋಭಾ, ಕವಿತಾ, ವೈಶಾಲಿ, ಷಣ್ಮುಖ, ಬಿ.ಟಿ. ಪ್ರಸನ್ನ, ಸಾಗರ್, ನವೀನ್ ಮತ್ತಿತರರಿದ್ದರು. ಶಿರಂಗಾಲದ ಉಮಾಮಹೇಶ್ವರ ದೇವಾಲಯದ ಅರ್ಚಕ ಸಚಿನ್ ಪೂಜಾ ವಿಧಿಗಳನ್ನು ನಡೆಸಿದರು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿತರಣೆ ನಡೆಯಿತು.