ಮಡಿಕೇರಿ, ಜ. ೨೨: ಮರ್ಯಾದ ಪುರುಷೋತ್ತಮ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆದು ವರ್ಷ ತುಂಬಿರುವ ಸಂಭ್ರಮದಲ್ಲಿ ಬುಧವಾರ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ನಗರದಲ್ಲಿ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಭಾರತೀಯರ ಶತ ಶತಮಾನಗಳ ಕನಸು ಕಳೆದ ಸಾಲಿನಲ್ಲಿ ಶ್ರೀ ಬಾಲ ರಾಮನ ಪ್ರತಿಷ್ಠಾಪನೆಯೊಂದಿಗೆ ಅಯೋಧ್ಯೆಯ ಭವ್ಯ ಸುಂದರ ಮಂದಿರ ಭಕ್ತರಿಗೆ ತೆರೆದುಕೊಂಡಿದೆ. ಈ ಸಂಭ್ರಮವನ್ನು ಕಳೆದ ಸಾಲಿನಲ್ಲಿಯೂ ಶ್ರೀರಾಮ ಜನ್ಮಭೂಮಿ ಸೇವಾ ಸಮಿತಿ ಅನ್ನ ಸಂತರ್ಪಣೆಯ ಮೂಲಕ ಜನ ಮಾನಸದೊಂದಿಗೆ ಹಂಚಿಕೊAಡಿತ್ತು.

ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಬುಧವಾರ ಮಧ್ಯಾಹ್ನ ೧೨ ಗಂಟೆಯಿAದ ಸಂಜೆಯವರೆಗೆ ಇಲ್ಲಿನ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಅನ್ನಸಂತರ್ಪಣೆ ನಡೆಯಿತು.

ಅಯೋಧ್ಯೆಯ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೊಂಡು ಒಂದು ವರ್ಷವಾದ ಹಿನೆÀ್ನಲೆಯಲ್ಲಿ ಗೋಣಿಕೊಪ್ಪಲಿನ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಹಿಂದೂ ಸಂಘಟನೆ ವತಿಯಿಂದ ಬಸ್ ನಿಲ್ದಾಣದಲ್ಲಿ ಅನ್ನಸಂತರ್ಪಣೆ ಜರುಗಿತು. ಉಮಾಮಹೇಶ್ವರಿ ದೇವಾಲಯದಲ್ಲಿ ಪೂಜೆ ಬಳಿಕ ಲಕ್ಷಿö್ಮ ದೇವಾಲಯ ಹಾಗೂ ಹರಿಶ್ಚಂದ್ರಪುರದ ಮುತ್ತಪ್ಪ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸಂಘಚಾಲಕ್ ಚಕ್ಕೇರ ಮನು, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ,ಜಿಲ್ಲಾ ಒಬಿಸಿ ಮೋರ್ಚಾ ಸದಸ್ಯ ಅಕ್ಷಯ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಮನ್ನಕ್ಕಮನೆ ಸೌಮ್ಯಬಾಲು, ರತಿ ಅಚ್ಚಪ್ಪ, ವಿವೇಕ್ ರಾಯ್ಕರ್, ಕೊಣಿಯಂಡ ಬೋಜಮ್ಮ, ಮತ್ತಿತರರು ಭಾಗಿಯಾಗಿದ್ದರು.

(ಮೊದಲ ಪುಟದಿಂದ) ಸಮಿತಿಯ ಪದಾಧಿಕಾರಿಗಳು, ನೆರವು ನೀಡಿದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರದ್ಧೆಯಿಂದ ಈ ಕಾರ್ಯ ನೆರವೇರಿಸಿದ್ದು ವಿಶೇಷವಾಗಿತ್ತು. ನಗರ ವ್ಯಾಪ್ತಿಯ ಹಾಗೂ ದೂರದೂರುಗಳಿಂದ ಆಗಮಿಸಿದ ನೂರಾರು ಸಾರ್ವಜನಿಕರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು, ಅನ್ನ ಪ್ರಸಾದವನ್ನು ಸ್ವೀಕರಿಸಿದರು.

ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯ ನಿರ್ದೇಶಕರಾದ ಪಿ.ಡಿ.ನವೀನ್, ಬಿ.ಎಸ್. ಪ್ರಭು ರೈ, ಎಂ.ಯು.ರಘ, ಪ್ರಸಾದ್ ಸಂಪಿಗೆಕಟ್ಟೆ, ಸದಾಶಿವ ರೈ, ಆನಂದ್, ಬಿ.ಎಂ.ಶೇಖರ್ ಅವರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಅನ್ನಸಂತರ್ಪಣಾ ಕಾರ್ಯವನ್ನು ನೆರವೇರಿಸಿದರು.ವೀರಾಜಪೇಟೆ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡಿ ಒಂದು ವರ್ಷ ಪೂರೈಕೆ ಆದ ಹಿನ್ನೆಲೆಯಲ್ಲಿ ವೀರಾಜಪೇಟೆಯ ಪ್ರಕಾಶ್ ಕುಠೀರದ ಬಳಿಯಿರುವ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ದೇವಾಲಯದ ಅರ್ಚಕರಾದ ಗೋಪಾಲ್ ಭಟ್ ಸಮ್ಮುಖದಲ್ಲಿ ನಡೆಯಿತು. ಶ್ರೀರಾಮನ ಭಕ್ತಾದಿಗಳು ಹಾಜರಿದ್ದರು. ಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.ಶ್ರೀ ರಾಮಮಂದಿರ ಲೋಕಾರ್ಪಣೆ ಆಗಿ ಒಂದು ವರ್ಷದ ಹಿನ್ನೆಲೆಯಲ್ಲಿ ಪ್ರಥಮ ವಾರ್ಷಿಕೋತ್ಸವವನ್ನು ಅರ್ವತೋಕ್ಲು ಮೈಸೂರಮ್ಮ ನಗರದ ಮುತ್ತಪ್ಪ ದೇವಸ್ಥಾನದಲ್ಲಿ ರಾಮ ಭಜನೆ ಮಾಡುವುದರ ಮೂಲಕ ಆಚರಿಸಲಾಯಿತು. ೬೦ ಮಂದಿ ರಾಮ ಭಕ್ತರು ಭಾಗವಹಿಸಿದ್ದರು

ಭಜನೆ ನಂತರ ಶ್ರೀ ರಾಮನಿಗೆ ಮಂಗಳಾರತಿ ಮಾಡಿ ಪ್ರಸಾದ ವಿತರಿಸಲಾಯಿತು.ಅಯೋಧ್ಯೆಯಲ್ಲಿ ಶ್ರೀ ಶ್ರೀರಾಮ ಮಂದಿರ ನಿರ್ಮಾಣಗೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಿದ್ದಾಪುರದ ಕೇಸರಿ ಯೂತ್ ಮೂಮೆಂಟ್ ಸೇವಾ ಸಮಿತಿ ವತಿಯಿಂದ ಗಣಪತಿ ದೇವಾಲಯದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ಕಕ್ಕೆಹೊಳೆ ಸಮೀಪ ಸಾರ್ವಜನಿಕ ಭಕ್ತಾದಿಗಳು ಶ್ರೀ ರಾಮನ ವಿಗ್ರಹವನ್ನು ಅಳವಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.

ಅಂತೆಯೇ ಮಸಗೋಡು ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ಗ್ರಾಮಸ್ಥರು ಶ್ರೀ ರಾಮನ ಭಾವಚಿತ್ರ ಅಳವಡಿಸಿ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಿದರು.