ಮಡಿಕೇರಿ, ಜ. ೨೨: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಎನ್.ಸಿ.ಸಿ. ಪಥಸಂಚಲನದಲ್ಲಿ ಭಾಗವಹಿಸಲು ಸುಂಟಿಕೊಪ್ಪದ ಮಂಥನ್ ಎ. ಆಯ್ಕೆಯಾಗಿದ್ದಾನೆ. ಕೆಡೆಟ್ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಮಂಥನ್ ರಾಷ್ಟಿçÃಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾನೆ. ಸುಂಟಿಕೊಪ್ಪದ ನಿವಾಸಿ ಟಿ.ಜಿ. ಅಶ್ವತ್ ಹಾಗೂ ಜ್ಯೋತಿ ದಂಪತಿ ಪುತ್ರ, ಬೆಂಗಳೂರಿನ ರೇವಾ ಯೂನಿವರ್ಸಿಟಿಯಲ್ಲಿ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಾನೆ.