ಹೆಬ್ಬಾಲೆ, ಜ. ೨೨: ಹೆಬ್ಬಾಲೆ ಗ್ರಾಮದ ಕನಕ ಬ್ಲಾಕ್ ನಿವಾಸಿ ಎಂ. ಸೋನಿಯಾ ಬಿ.ಎಡ್ ಕೋರ್ಸ್ನಲ್ಲಿ ಮೂರನೇ ರ‍್ಯಾಂಕ್ ಗಳಿಸಿದ್ದಾಳೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ೨೦೨೩-೨೪ನೇ ಸಾಲಿನ ಬಿ.ಎಡ್ (ಃ.ಇಜ) ಕೋರ್ಸ್ ಫಲಿತಾಂಶವನ್ನು ಪ್ರಕಟಿಸಿದ್ದು, ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಡ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೋನಿಯಾ ಶೇ. ೯೬.೫೪ ಅಂಕಗಳಿಸುವ ಮೂಲಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಸೋನಿಯಾ ಪೊಲೀಸ್ ಅಧಿಕಾರಿಯಾಗಿದ್ದ ದಿ. ಹೆಚ್.ಜೆ. ಮಹೇಶ್ ಮತ್ತು ಮಣಿ ದಂಪತಿ ಪುತ್ರಿ.