ಮಡಿಕೇರಿ, ಜ. ೨೨: ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಫೆ. ೨೭ ರಂದು ಕೊಡಗು ಜಿಲ್ಲೆಯ ಬಡ ಮುಸ್ಲಿಂ ಜೋಡಿಗಳಿಗೆ ಸುಂಟಿಕೊಪ್ಪದ ಎಸ್.ಎಸ್. ಇಂಟರ್ನ್ಯಾಷನಲ್ ಹಾಲ್ನಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ನಡೆಸಲು ನಿರ್ಧರಿಸಿದ್ದು, ಇದಕ್ಕಾಗಿ ವಧುವಿನ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಹೆಚ್. ಅಹ್ಮದ್ ಹಾಜಿ ಹಾಗೂ ಕಾರ್ಯದರ್ಶಿ ಎಂ.ಇ. ಮೊಹಿದ್ದೀನ್ ತಿಳಿಸಿದ್ದಾರೆ.
ಕಳೆದ ೨೧ ವರ್ಷಗಳಿಂದ ಬಡ ಮುಸ್ಲಿಂ ಯುವತಿಯರಿಗೆ ಉಚಿತ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರತ್ತಿರುವ ಆಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯು ಇದೀಗ ತನ್ನ ಕಾರ್ಯ ಸಾಧನೆಯ ೨೨ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ವರ್ಷಕ್ಕೆ ಇಪ್ಪತ್ತೆöÊದು ವಿವಾಹವನ್ನು ಉಚಿತವಾಗಿ ನಡೆಸಿಕೊಡುವ ಗುರಿಯನ್ನು ಸಮಿತಿ ಹೊಂದಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕಳೆದ ೨೧ ವರ್ಷಗಳಲ್ಲಿ ೪೬೩ ಮುಸ್ಲಿಂ ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿರಿಸುವಂತೆ ಮಾಡುವಲ್ಲಿ ಸಮಿತಿಯು ಗಣನೀಯ ಸಾಧನೆಯನ್ನು ಮಾಡಿದೆ. ಈ ವರ್ಷವೂ ವಧುವಿಗೆ ತಲಾ ಒಂದು ಜೊತೆ ಉಡುಪು, ವರನಿಗೂ ಒಂದು ಜೊತೆ ಉಡುಪು ನೀಡಲಾಗುವುದು. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ವಧು-ವರರ ಕಡೆಯವರಿಗೂ ಸೇರಿದಂತೆ ಸಾರ್ವಜನಿಕರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಸಹ ಮಾಡಲಾಗುವುದು.
ಉಚಿತ ಸಾಮೂಹಿಕ ವಿವಾಹದ ಅರ್ಜಿ ನಮೂನೆಗಳನ್ನು ಫೆ. ೧೫ ರೊಳಗಾಗಿ ಅಗತ್ಯವಿರುವ ಎಲ್ಲಾ ಲಗತ್ತುಗಳೊಂದಿಗೆ ಭರ್ತಿ ಮಾಡಿ ಸಮಿತಿಗೆ ತಲುಪಿಸಬೇಕು.
ಅರ್ಜಿಗಳನ್ನು ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ ಸಮೀಪದ ಫೈವ್ಸ್ಟಾರ್ ವಾಚ್ ಅಂಗಡಿ (೯೮೪೪೫೩೪೭೪೩), ವೀರಾಜಪೇಟೆಯ ಮಟನ್ ಮಾರ್ಕೆಟ್ ರಸ್ತೆಯ ಗ್ರೀನ್ ಲ್ಯಾಂಡ್ ಬಾಳೆಮಂಡಿ ನೌಫಲ್ (೯೫೩೫೩೨೩೯೨೦), ಗೋಣಿಕೊಪ್ಪ ಮುಖ್ಯ ರಸ್ತೆಯ ಟೈಂಮಿಷಿನ್ ವಾಚ್ ಅಂಗಡಿಯ ಬಶೀರ್ ಹಾಜಿ (೮೨೮೯೮೮೭೬೬೮), ನೆಲ್ಲಿಹುದಿಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಕೆ. ಹಕೀಂ (೯೪೪೮೩೫೪೫೬೮), ಸುಂಟಿಕೊಪ್ಪ ೨ನೇ ಬ್ಲಾಕ್ ಕೆ.ಇ.ಬಿ. ಬಳಿ ಆರ್. ಹಸನ್ಕುಂಞೆ ಹಾಜಿ (೯೮೮೬೮೬೩೦೪೫), ಕುಶಾಲನಗರ ಜನತಾ ಕಾಲೋನಿ ಎಂ.ಇ. ಮೊಹಿದ್ದೀನ್ (೯೪೪೮೫೦೪೨೮೨), ಕೊಡ್ಲಿಪೇಟೆ ಮಸ್ಲಿಸುನ್ನೂರ್ ಮಸೀದಿ ಮಾಜಿ ಅಧ್ಯಕ್ಷ ಸುಲೈಮಾನ್ (೯೪೪೮೭೨೧೨೦೩), ನಾಪೋಕ್ಲು ಸ್ಟಾರ್ ಸರ್ವೀಸ್ ಸ್ಟೇಷನ್ ಟಿ.ಎ. ಹನೀಫ್ (೯೯೮೦೧೫೯೮೨೫), ಕೊಟ್ಟಮುಡಿ ಪಿ.ಎ. ಹುಸೈನ್ (ಉಂದಾರು-೯೯೦೦೭೫೦೨೧೧೨) ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಅಧ್ಯಕ್ಷ ಬಿ.ಹೆಚ್. ಅಹ್ಮದ್ ಹಾಜಿ - ೯೪೮೦೨೩೮೫೩೫, ಉಪಾಧ್ಯಕ್ಷ ಎಂ.ಇ. ಮಹಮ್ಮದ್ - ೯೯೬೪೦೭೬೬೯೮, ಕಾರ್ಯದರ್ಶಿ ಎಂ.ಇ. ಮೊಹಿದ್ದೀನ್ -೯೪೪೮೫೦೪೨೮೨, ಖಜಾಂಚಿ ಎನ್.ಎ. ಲತೀಫ್ ಹಾಜಿ -೭೦೧೯೦೯೫೪೨೬ ಸಂಪರ್ಕಿಸಬಹುದಾಗಿದೆ ಎಂದು ಬಿ.ಹೆಚ್. ಅಹ್ಮದ್ ಹಾಜಿ ತಿಳಿಸಿದ್ದಾರೆ.