ಮಡಿಕೇರಿ, ಜ. ೨೩: ಮಡಿಕೇರಿಯ ನಿಶ್ಟಿ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಗೊಂಡಿರುವ ಬಿ.ಸಿ.ವಿನು ಮಹೇಶ್ ರೈ ನಿರ್ದೇಶನದ "ಮಾಸ್ಟರ್ ಮೈಂಡ್" ಕನ್ನಡ ಚಲನಚಿತ್ರ ತಾ.೨೪ ರಿಂದ (ಇಂದಿನಿAದ) ಏಳು ದಿನಗಳ ಕಾಲ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರದಲ್ಲಿ ಪ್ರಾಯೋಗಿಕ ಪ್ರದರ್ಶನ ಕಾಣಲಿದೆ.

ಈ ಕುರಿತು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ದೇಶಕ ಬಿ.ಸಿ.ವಿನು ಮಹೇಶ್ ರೈ ಚಿತ್ರದಲ್ಲಿ ಕೊಡಗಿನ ಅನೇಕ ಕಲಾವಿದರು ಅಭಿನಯಿಸಿದ್ದು, ಬಹುತೇಕ ಚಿತ್ರೀಕರಣ ಜಿಲ್ಲೆಯಲ್ಲೇ ನಡೆದಿದೆ. ಸಾಹಸ, ಸಾಂಸಾರಿಕ ಮತ್ತು ಹಾಸ್ಯಭರಿತವಾಗಿರುವ "ಮಾಸ್ಟರ್ ಮೈಂಡ್" ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾಗಿದೆ. ಕೊಡಗಿನ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪತ್ರಕರ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ. ತಾ.೨೪ರಂದು (ಇಂದು) ಸಂಜೆ ೪.೩೦ ಗಂಟೆಗೆ ಪ್ರದರ್ಶನ ಆರಂಭಗೊಳ್ಳಲಿz. ತಾ. ೨೫ರಿಂದ ಆರು ದಿನಗಳ ಕಾಲ ಸಂಜೆ ೫.೩೦ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಕಥಾ ಸಾರಾಂಶ : ಆಕಸ್ಮಿಕವಾಗಿ ಸಿಕ್ಕಿದ ಶ್ರೀಮಂತನ ಡೈರಿಯೊಂದನ್ನು ಓದಿದ ಮೂವರು ಕಳ್ಳರು ಆ ಶ್ರೀಮಂತನ ಮನೆ ಸೇರಿಕೊಳ್ಳುತ್ತಾರೆ. ಮೋಸ ಮಾಡಲೆಂದು ಬಂದ ಮೂವರು ಅಲ್ಲಿ ಸಿಕ್ಕ ತಾಯಿ ಪ್ರೀತಿಯಿಂದ ತಮ್ಮ ವಂಚನೆಯ ಗುಣವನ್ನು ಬಿಟ್ಟು ಪ್ರೀತಿಗಾಗಿ ಮನ ಮಿಡಿಯುತ್ತಾರೆ. ಅಲ್ಲದೆ ಅನಾರೋಗ್ಯ ಪೀಡಿತ ತಾಯಿಯ ಜೀವ ಉಳಿಸುವುದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಕಥೆಯನ್ನು "ಮಾಸ್ಟರ್ ಮೈಂಡ್" ನಲ್ಲಿ ಅಳವಡಿಸಿ ಕೊಳ್ಳಲಾಗಿದೆ. ನಾಲ್ಕು ಹಾಡು ಮತ್ತು ನಾಲ್ಕು ಸಾಹಸ ದೃಶ್ಯಗಳು ಚಿತ್ರಕ್ಕೆ ಹೆಚ್ಚಿನ ಆಕರ್ಷಣೆಯನ್ನು ತಂದು ಕೊಟ್ಟಿದೆ. ಕೊಡಗಿನಲ್ಲೇ ಹುಟ್ಟಿ ಬೆಳೆದ ಕಾರಣಕ್ಕಾಗಿ ಅಭಿಮಾನದಿಂದ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರದಲ್ಲಿ ೭ದಿನ ಪ್ರಾಯೋಗಿಕ ಪ್ರದರ್ಶನ ಮಾಡಲಾಗುತ್ತಿದೆ. ಅಭಿಮಾನ ಮತ್ತು ಸಿನಿಮಾಸಕ್ತಿಯಿಂದ ಚಿತ್ರ ನಿರ್ಮಿಸಿದ್ದೇವೆಯೇ ಹೊರತು ಲಾಭ ಮಾಡುವುದಕ್ಕಾಗಿ ಅಲ್ಲ. ಇದು ನನ್ನ ನಿರ್ದೇಶನದ ಮೂರನೇಯ ಚಿತ್ರವಾಗಿದ್ದು, ಜಿಲ್ಲೆಯ ಜನ ಬಂದು ಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಫೆಬ್ರವರಿ ತಿಂಗಳಿನಲ್ಲಿ ರಾಜ್ಯಾದ್ಯಂತ "ಮಾಸ್ಟರ್ ಮೈಂಡ್" ಚಿತ್ರ ತೆರೆ ಕಾಣಲಿದೆ ಎಂದು ತಿಳಿಸಿದರು. ಚಿತ್ರದಲ್ಲಿ ಆದಿಕೇಶ, ಅರ್ಚನ ರಾವ್, ದಿಶಾ ಪೂವಯ್ಯ, ಉಮೇಶ್ ಮಿಜಾರ್, ರಾಘವೇಂದ್ರ ರೈ, ಉಗ್ರಂ ಮಂಜು, ವಿನಯ ಪ್ರಸಾದ್, ಜೈ ಜಗದೀಶ್, ಶ್ರೀನಿವಾಸ್ ಮೂರ್ತಿ, ಅರವಿಂದ್ ಬೋಳಾರ್, ಸುಂದರ್ ರೈ ಮಂದಾರ, ರಾಧಿಕ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.

ನಿರ್ದೇಶಕ ವಿನು ಮಹೇಶ್ ಅವರು ಸಾಹಿತ್ಯ ರಚನೆಯೊಂದಿಗೆೆ ಈ ಚಿತ್ರಕ್ಕೆ ನಿರ್ಮಾಪರೂ ಆಗಿದ್ದಾರೆ, ನಾಗರಾಜ್, ಆದಿಕೇಶವ್ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ವಿನ್ಸೆಂಟ್, ಸಾಹಸ ಕೆ.ಜಿ.ಎಫ್ ವಿಕ್ರಂ, ಪಳನಿರಾಜ್, ಸಂಕಲನ ಸುರೇಶ್ ಅರಸ್, ಸಹ ಸಂಕಲನ ಮಂಜುನಾಥ್, ಸಂಗೀತ ಎ.ಟಿ.ರವೀಶ್, ನೃತ್ಯ ನಿರ್ದೇಶನ ಮಂಜು ಸುಳ್ಯ ನೀಡಿದ್ದಾರೆ. ಸಹನಾ ರೈ, ಕೀರ್ತಿ ಮರಾಠ, ಅಜಯ್ ವಾರಿಯರ್ ಹಾಡುಗಳನ್ನು ಹಾಡಿದ್ದಾರೆ. ನಿರ್ಮಾಣ ವ್ಯವಸ್ಥಾಪಕರಾಗಿ ಜಬ್ಬಂಡ ಕಿರಣ್, ಸಂಭಾಷಣೆಕಾರರು ಹಾಗೂ ಸಹ ನಿರ್ದೇಶಕರಾಗಿ ಜಗನ್ ಮಾತೆ ಮೋಹನ್ ಕಾರ್ಯನಿರ್ವಹಿಸಿದ್ದಾರೆ.

ಗೋಷ್ಠಿಯಲ್ಲಿ ವ್ಯವಸ್ಥಾಪಕ ಜಬ್ಬಂಡ ಕಿರಣ್, ನಿರ್ಮಾಣ ಸಹಾಯಕ ಪಿ.ಹೆಚ್. ರಜಾಕ್, ಖಳ ನಟರುಗಳಾದ ಪೊರಿಮಂಡ ಲೋಕೇಶ್ ಹಾಗೂ ಬಿ.ಸಿ.ನಾರಾಯಣ ಉಪಸ್ಥಿತರಿದ್ದರು.