ನವದೆಹಲಿ, ಫೆ.೧: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯ ಸಂಸತ್ ಭವನದಲ್ಲಿ ೮ನೆ ಬಾರಿಗೆ ಕೇಂದ್ರ ಆಯವ್ಯಯ ಮಂಡಿಸಿದರು. ಪ್ರಮುಖವಾಗಿ ಆದಾಯ ತೆರಿಗೆಯಲ್ಲಿ ಭಾರೀ ವಿನಾಯಿತಿ ಕಲ್ಪಿಸುವ ಮೂಲಕ ಮಧ್ಯಮ ವರ್ಗದವರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೆ, ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದು ಆರೋಗ್ಯ ರಕ್ಷಣೆಗೆ ವಿಶೇಷ ಗಮನ ಹರಿಸಲಾಗಿದೆ. ಜೊತೆಗೆ ಯುವಜನಾಂಗ, ಮಹಿಳೆಯರು ಹಾಗೂ ಕೃಷಿಕರ ಅಭಿವೃದ್ಧಿಗೆ ಪೂರಕವಾಗಿ ೨೦೨೫-೨೬ ಯೋಜನೆ ರೂಪಿಸಲಾಗಿದ್ದು, ರೂ.೫೦,೬೫,೩೪೫ ಕೋಟಿ ಮೊತ್ತದ ಆಯವ್ಯಯವನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವೆ ಮಾಹಿತಿ ನೀಡಿದರು. ಸಮಗ್ರ ಅಭಿವೃದ್ಧಿ, ಖಾಸಗಿ ವಲಯಗಳಿಗೆ ಪ್ರೋತ್ಸಾಹ ಹಾಗೂ ಮಧ್ಯಮವರ್ಗದ ಏಳಿಗೆಗೆ ಆಯವ್ಯಯವು ಪೂರಕವಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟರು.

ರೂ. ಹನ್ನೆರಡು ಲಕ್ಷದವರೆಗೆ ವಾರ್ಷಿಕ ಆದಾಯ ಇರುವವರು ತೆರಿಗೆ ಕಟ್ಟುವಂತಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ಅಲ್ಲದೆ, ಬಡವರು, ಯುವಕರು, ಮಹಿಳೆಯರು, ಕೃಷಿಕರು, ಉತ್ಪಾದನಾ ಉದ್ಯಮಿಗಳು, ಎಂಎಸ್‌ಎAಇ ಗಳು, ಉದ್ಯೋಗ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ ೧೦ ಪ್ರಮುಖ ಅಭಿವೃದ್ಧಿ ಕ್ರಮಗಳನ್ನು ಸಚಿವರು ವಿವರಿಸಿದರು.

ಕಡಿಮೆ ಕೃಷಿ ಇಳುವರಿ ಇರುವ ೧೦೦ ಜಿಲ್ಲೆಗಳಿಗೆ ಹೊಸ ಯೋಜನೆ ಯೊಂದಿಗೆ ಪ್ರಧಾನಿ ಧನ್ ಧಾನ್ಯ ಕೃಷಿ ಯೋಜನೆ ಜಾರಿಗೊಳಿಸಲಾಗುವುದು. ಕಿಸಾನ್ ಕ್ರೆಡಿಟ್ ಸಾಲದ ಮಿತಿ ರೂ. ೫ ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಈ ಬಾರಿಯೂ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಉತ್ತೇಜನಕ್ಕೆ ಹೊಸ ಯೋಜನೆ ಘೋಷಣೆ ಮೂಲಕ ೨೨ ಲಕ್ಷ ಮಹಿಳಾ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ೧೨೦ ಹೊಸ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ. ಜೀವ ರಕ್ಷಕ ಔಷಧಗಳ ಸೀಮಾ ಸುಂಕವನ್ನು ಸಂಪೂರ್ಣ ರದ್ದುಗಳಿಸಲಾಗಿದೆ, ಮುಂದಿನ ೩ ವರ್ಷಗಳಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದರು. ಅಲ್ಲದೆ, ಕೇಂದ್ರ ಬಜೆಟ್‌ನಲ್ಲಿ ಭ್ರಷ್ಟಾಚಾರ ತನಿಖಾ ತಂಡಕ್ಕೂ ಮಹತ್ವ ನೀಡಿದ್ದು ಸಿಬಿಐಗೆ ೧,೦೭೧ ಕೋಟಿ ರೂ ಮೀಸಲಿರಿಸಲಾಗಿದೆ ಎಂದು ಸಚಿವೆ ನುಡಿದರು. ಎನ್‌ಡಿಎ ಮಿತ್ರ ಪಕ್ಷಗಳ ಆಡಳಿತದ ರಾಜ್ಯಗಳಾದ ಬಿಹಾರ್ ಮತ್ತು ಆಂಧ್ರಪ್ರದೇಶಗಳಿಗೆ ಬಜೆಟ್‌ನಲ್ಲಿ ಬೃಹತ್ ಯೋಜನೆಗಳಿಗಾಗಿ ಅಧಿಕ ಅನುದಾನ ನೀಡಲಾಗುವುದು. ಅನೇಕ ಎಲೆಕ್ಟಾçನಿಕ್ ವಸ್ತುಗಳು, ಲೀತಿಯಂ ಬ್ಯಾಟರಿ ಇತ್ಯಾದಿಗÀಳ ಕಸ್ಟಂ ಸುಂಕಗಳನ್ನೂ ಇಳಿಸಲಾಗಿದೆ. ಸಂಶೋಧನಾ ವಿಭಾಗಕ್ಕೂ ಕೊಡುಗೆÀ ನೀಡಲಾಗಿದೆ.

ಆದಾಯ ತೆರಿಗೆ ವಿನಾಯಿತಿಯಲ್ಲಿ ಬದಲಾವಣೆ - ರೂ.೧೨ ಲಕ್ಷವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ

ಮಧ್ಯಮ ವರ್ಗದವರ ಏಳಿಗೆಗಾಗಿ ಆದಾಯ ತೆರಿಗೆಯಲ್ಲಿ ಬದಲಾವಣೆಯನ್ನು ತರಲಾಗಿದ್ದು, ಮಾಹಿತಿ ಇಂತಿದೆ:

* ೦-೪ ಲಕ್ಷ ವರೆಗಿನ ಆದಾಯಕ್ಕೆ ಶೇ.೦ ತೆರಿಗೆ

* ೪-೮ ಲಕ್ಷ ವರೆಗಿನ ಆದಾಯಕ್ಕೆ ಶೇ.೫ ತೆರಿಗೆ

* ೮-೧೨ ಲಕ್ಷ ವರೆಗಿನ ಆದಾಯಕ್ಕೆ ಶೇ.೧೦ ತೆರಿಗೆ

* ೧೨-೨೪ ಲಕ್ಷ ವರೆಗಿನ ಆದಾಯಕ್ಕೆ ಶೇ.೧೫ ತೆರಿಗೆ

* ೨೪ ಲಕ್ಷ ಮೇಲೆ ಆದಾಯ ಇರುವವರಿಗೆ ಶೇ.೩೦ ತೆರಿಗೆ

ಇದರಲ್ಲಿ ವಾರ್ಷಿಕ ರೂ೧೨ ಲಕ್ಷ ವರೆಗೆ ಆದಾಯ ಪಡೆಯುವವರಿಗೆ ಟ್ಯಾಕ್ಸ್ ರಿಬೇಟ್ ಹಾಗೂ ಟ್ಯಾಕ್ಸ್ ಬೆನಿಫಿಟ್ ನೀಡಲಾಗುವುದು. ಈ ಮೂಲಕ ರೂ.೧೨ ಲಕ್ಷವರೆಗೆ ಆದಾಯಗಳಿಸುವವರಿಗೆ ಶೂನ್ಯ ತೆರಿಗೆ ಪಾವತಿಸಿದಂತೆಯೇ ಆಗುತ್ತದೆ ಎಂಬುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದರು. ಹಿರಿಯ ನಾಗರಿಕರಿಗೆ ತೆರಿಗೆ ಕಡಿತದ ಮಿತಿಯನ್ನು ೧ ಲಕ್ಷ ರೂಪಾಯಿಗೆ ದ್ವಿಗುಣಗೊಳಿಸಲಾಗಿದೆ. ಹಾಗೆಯೇ ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿಯನ್ನು ರೂ. ೨.೪ ಲಕ್ಷ ರೂಪಾಯಿಗಳಿಂದ ರೂ.೬ ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ೩ಏಳನೇ ಪುಟಕ್ಕೆ ಧನ್-ಧಾನ್ಯ ಕೃಷಿ ಯೋಜನೆ - ೧.೭ ಕೋಟಿ ಕೃಷಿಕರಿಗೆ ಪ್ರಯೋಜನ

ರಾಜ್ಯಗಳ ಸಹಕಾರದೊಂದಿಗೆ ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಮೂಲಕ ಕೃಷಿ ಉತ್ಪಾದನೆಯಲ್ಲಿ ಕಡಿಮೆ ಇರುವ ೧೦೦ ಜಿಲ್ಲೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುವುದು. ೧.೭ ಕೋಟಿ ಕೃಷಿಕರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್ಗಳ ಮೂಲಕ ೭.೭ ಕೋಟಿ ಕೃಷಿಕರು, ಮೀನುಗಾರರು ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ರೂ.೫ ಲಕ್ಷದವರೆಗೆ ಅಲ್ಪಾವಧಿ ಸಾಲ ಸೌಲಭ್ಯ ಕಲ್ಪಿಸಲಾಗುವುದು.

ಕೀಟ ನಿರೋಧಕ, ಹವಾಮಾನ ವೈಪರಿತ್ಯತಡೆಯಬಲ್ಲ ಅಧಿಕ ಇಳುವರಿಯ ಬೀಜಗಳ ತಳಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಹತ್ತಿ ಉತ್ಪಾದನೆಗೆ ಯೋಜನೆ ರೂಪಿಸುವುದಲ್ಲದೆ ಇತ್ತೀಚೆಗೆ ಪ್ರಖ್ಯಾತಿ ಪಡೆಯುತ್ತಿರುವ ತಾವರೆ ಬೀಜ(ಮಖಾನ)ವನ್ನು ಮಾರುಕಟ್ಟೆಯಲ್ಲಿ ಪ್ರಸಿದ್ಧಿಗೊಳಿಸಲು ಬಿಹಾರ್‌ನಲ್ಲಿ ಮಖಾನ ಮಂಡಳಿಯನ್ನು ಸ್ಥಾಪಿಸಲಾಗುವುದು.ಕಸ್ಟಮ್ ಸುಂಕದಲ್ಲಿ ಇಳಿಕೆ

ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಿರುವ ಲೀತಿಯಮ್-ಅಯಾನ್ ಬ್ಯಾಟರಿಗಳ ಉತ್ಪಾದನೆಗೆ ಅಗತ್ಯವಿರುವ ೩೫ ಹೆಚ್ಚುವರಿ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ.

ಕ್ಯಾಮರಾ, ಹೆಡ್‌ಫೋನ್, ಮೈಕ್ರೊಫೋನ್, ಟಿವಿಗಳ ಎಲ್.ಸಿ.ಡಿ, ಎಲ್.ಇ.ಡಿ ಪ್ಯಾನಲ್, ಮೊಬೈಲ್ ಫೋನ್ ಸೆನ್‌ಸರ್‌ಗಳ ಉತ್ಪಾದನೆಯಲ್ಲಿ ಬಳಸುವ ಭಾಗಗಳ ಮೇಲಿದ್ದ ಶೇ.೨.೫ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ.

೧೬೦೦ ಸಿ.ಸಿ ವರೆಗಿನ ಇಂಜಿನ್ ಕೆಪಾಸಿಟಿ ಹೊಂದಿರುವ ಬೈಕ್‌ಗಳ ಮೇಲಿನ ಸುಂಕವನ್ನು ಶೇ.೫೦ ರಿಂದ ಶೇ.೪೦ಕ್ಕೆ ಇಳಿಸಲಾಗಿದೆ. ೧,೬೦೦ ಸಿ.ಸಿ ಮೇಲೆ ಸಾಮರ್ಥ್ಯ ಹೊಂದಿರುವ ಇಂಜಿನ್‌ವುಳ್ಳ ಬೈಕ್‌ಗಳ ಮೇಲಿನ ಸುಂಕವನ್ನು ಶೇ.೫೦ ರಿಂದ ೩೦ಕ್ಕೆ ಇಳಿಸಲಾಗಿದೆ.

ಟ ೪೦,೦೦೦ ಯು.ಎಸ್ ಡಾಲರ್‌ಗಿಂತ ಹೆಚ್ಚು ಮೊತ್ತದ ವಾಹನಗಳು, ಬೈಸಿಕಲ್‌ಗಳು, ದೋಣಿಗಳ ಮೇಲೆಯು ಸುಂಕದ ಮೊತ್ತ ಇಳಿಸಲಾಗಿದೆ.