ಮಡಿಕೇರಿ, ಫೆ. ೧: ೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯೂ ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಬಲಿಷ್ಠವಾಗಿದ್ದ ಕೊಡಗಿನಲ್ಲಿ ಜನತಾ ಪಕ್ಷ ಪ್ರಬಲ ಎದುರಾಳಿಯಾಗಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಜನತಾ ಪಕ್ಷವೂ ಮೊದಲ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಪೈಪೋಟಿ ನೀಡಿತ್ತು. ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಜಿಲ್ಲಾ ಪರಿಷತ್ ಕ್ಷೇತ್ರವು ಹೈವೋಲ್ಟೇಜ್ ಕ್ಷೇತ್ರವಾಗಿತ್ತು.
ಕಾರಣವೇನೆಂದರೆ ಕೊಡಗು ಜಿಲ್ಲಾ ಪರಿಷತ್ ಪ್ರಥಮ ಅಧ್ಯಕ್ಷರಾಗಿದ್ದ ಜೆ.ಎ. ಕರುಂಬಯ್ಯ ನವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಗೋಣಿಕೊಪ್ಪಲು ಜಿಲ್ಲಾ ಪರಿಷತ್ ಕ್ಷೇತ್ರದಿಂದ ಜೆ.ಎ. ಕರುಂಬಯ್ಯ ವಿರುದ್ಧ ಜನತಾ ಪಕ್ಷದ ಅಂದಿನ ರಾಜ್ಯ ಉಪಾಧ್ಯಕ್ಷರಾಗಿದ್ದ ಕೊಡಗು ಜಿಲ್ಲೆಯ ರಾಜಕೀಯದಲ್ಲಿ ಪ್ರಭಾವಿಯಾಗಿದ್ದ ಅಜ್ಜಿಕುಟ್ಟಿರ ಎನ್. ಸೋಮಯ್ಯ ಸ್ಪರ್ಧಿಸಿದ್ದರು. ಜೆ.ಎ. ಕರುಂಬಯ್ಯ ಕೂಡ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದರು. ಕೊಡಗು ಜಿಲ್ಲೆಯ ಎರಡು ಪ್ರಭಾವಿ ನಾಯಕರುಗಳ ಮಧ್ಯೆ ನಡೆದಿದ್ದ ಜಿಲ್ಲಾ ಪರಿಷತ್ ಚುನಾವಣಾ ಫೈಟ್ ಇಡೀ ಕೊಡಗು ಜಿಲ್ಲೆಯಲ್ಲಿ ಸದ್ದು ಮಾಡಿತ್ತು.
ಗೋಣಿಕೊಪ್ಪಲಿನಲ್ಲಿ ಜೆ.ಎ. ಕರುಂಬಯ್ಯ ಹಾಗೂ ಎ.ಎನ್. ಸೋಮಯ್ಯ ನಡುವೆ ಎಲೆಕ್ಷನ್ ಫೈಟ್ ರಂಗೇರಿತ್ತು.
ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದ್ದ ಗೋಣಿಕೊಪ್ಪಲು ಜಿಲ್ಲಾ ಪರಿಷತ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜೆ.ಎ. ಕರುಂಬಯ್ಯ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಎನ್. ಸೋಮಯ್ಯ ವಿರುದ್ಧ ಕೇವಲ ೬೦ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು.
ಗೋಣಿಕೊಪ್ಪಲು ಜಿಲ್ಲಾ ಪರಿಷತ್ (ಇಂದಿನ ಜಿಲ್ಲಾ ಪಂಚಾಯಿತಿ) ಕ್ಷೇತ್ರದ ಮೊದಲ ಸದಸ್ಯ ಜೆ.ಎ. ಕರುಂಬಯ್ಯನವರಾಗಿದ್ದಾರೆ.
ಗೋಣಿಕೊಪ್ಪಲು ಜಿಲ್ಲಾ ಪರಿಷತ್ ಕ್ಷೇತ್ರದಿಂದ ಜಿದ್ದಾಜಿದ್ದಿನ ಹೋರಾಟ ನಡೆಸಿ ಗೆಲುವು ಸಾಧಿಸುವುದರ ಮೂಲಕ ಜಿಲ್ಲಾ ಪರಿಷತ್ ಪ್ರವೇಶಿಸಿದ್ದ ಜೆ.ಎ. ಕರುಂಬಯ್ಯ ಪ್ರಥಮ ಪ್ರಯತ್ನದಲ್ಲೇ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಜಿಲ್ಲಾ ಪರಿಷತ್ ಚುನಾವಣಾ ಸೋಲು ಮಾಸುವ ಮುನ್ನವೇ ಜಿಲ್ಲಾ ಪರಿಷತ್ ಪ್ರವೇಶ!
ಅಜ್ಜಿಕುಟ್ಟಿರ ಎನ್. ಸೋಮಯ್ಯ ಕೊಡಗು ರಾಜಕಾರಣದಲ್ಲಿ ಪ್ರಭಾವಿ ಮುಖಂಡ. ಜನತಾ ಪಕ್ಷದ ಪ್ರಮುಖ ನಾಯಕನಾಗಿದ್ದರು. ಅದಲ್ಲದೇ ರಾಜ್ಯಮಟ್ಟದಲ್ಲಿ ತಮ್ಮದೇ ಪ್ರಭಾವದ ಮೂಲಕ ಹೆಸರುಗಳಿಸಿದ್ದರು.
೧೯೭೩ ರಿಂದ ೧೯೭೮ ರವರೆಗೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಬೋರ್ಡ್ (ತಾಲೂಕು ಅಭಿವೃದ್ಧಿ ಮಂಡಳಿ), ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎ.ಎನ್. ಸೋಮಯ್ಯ ಅವರು ೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆದರೆ ಜಿಲ್ಲಾ ಪರಿಷತ್ ಚುನಾವಣೆಯ ಸೋಲು ಮಾಸುವ ಮುನ್ನವೇ ಎ.ಎನ್. ಸೋಮಯ್ಯ ನವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಭಾಗ್ಯ ಒಲಿದು ಬಂದಿತ್ತು. ಕೊಡಗು ಜಿಲ್ಲಾ ಸ್ಥಳೀಯ ಸಂಸ್ಥೆಗಳಿAದ ವಿಧಾನಪರಿಷತ್‌ಗೆ ಜನತಾದಳದಿಂದ ಆಯ್ಕೆಯಾಗಿದ್ದರು. ೧೫.೭.೧೯೮೮ ರಿಂದ ೭.೭.೧೯೯೪ ರವರೆಗೆ ವಿಧಾನಪರಿಷತ್ ಸದಸ್ಯರಾಗಿ ಎ.ಎನ್. ಸೋಮಯ್ಯ ಅವರು ಕಾರ್ಯನಿರ್ವಹಿಸಿದ್ದರು. ೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಫೈಟ್ ನೀಡಿ ಸೋಲು ಕಂಡಿದ್ದ ಎ.ಎನ್. ಸೋಮಯ್ಯ ಅವರಿಗೆ ಕೇವಲ ಒಂದು ವರ್ಷದೊಳಗೆ ವಿಧಾನಪರಿಷತ್ ಸದಸ್ಯ ಸ್ಥಾನದ ಭಾಗ್ಯ ಒಲಿದಿತ್ತು. ಕೊಡಗು ಜಿಲ್ಲಾ ಪರಿಷತ್ ಮೊದಲ ಅವಧಿಯಲ್ಲಿ ಯಂ.ಸಿ. ನಾಣಯ್ಯ ಅವರು ಕೂಡ ವಿಧಾನಪರಿಷತ್ ಸದಸ್ಯರಾಗಿದ್ದರು. ೧.೪.೧೯೮೫ ರಲ್ಲಿ ಯಂ.ಸಿ. ನಾಣಯ್ಯ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಹಲವು ಹುದ್ದೆಗಳನ್ನು ನಿಭಾಯಿಸಿದ್ದ ಎಎನ್ ಸೋಮಯ್ಯ!
ವೀರಾಜಪೇಟೆ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ೫ ವರ್ಷಗಳ ಕಾಲ ಸೇವೆ ಸಲ್ಲಿಸಿ, ಅನುಭವಹೊಂದಿದ್ದ ಎ.ಎನ್. ಸೋಮಯ್ಯ ಅವರು ನಂತರ ೧೯೮೮ ರಿಂದ ೧೯೯೪ ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಇಂದಿನ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಎ.ಎನ್. ಸೋಮಯ್ಯ ಅವರು, ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲು ಆಸ್ಪತ್ರೆ ಸಮಿತಿಯ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ೬ ವರ್ಷಗಳ ಕಾಲ ಬೆಂಗಳೂರಿನ ಭಾರತೀಯ ಕಾಫಿ ಮಂಡಳಿಯ ಸದಸ್ಯ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
೧೨ ವರ್ಷಗಳ ಕಾಲ ಮಡಿಕೇರಿ, ಕೂರ್ಗ್ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ೨ ಅವಧಿಗೆ ಕರ್ನಾಟಕ ಸರ್ಕಾರದ ರಾಷ್ಟಿçÃಯ ಉಳಿತಾಯ ಸಲಹಾ ಸಮಿತಿಯ ಸದಸ್ಯರಾಗಿದ್ದರು. ೨ ಅವಧಿಗೆ ಕರ್ನಾಟಕ ಸರ್ಕಾರದ ಅರಣ್ಯ ಸಲಹಾ ಸಮಿತಿಯ ಸದಸ್ಯರಾಗಿ ಕೂಡ ಎ.ಎನ್. ಸೋಮಯ್ಯ ಅವರು ಕಾರ್ಯನಿರ್ವಹಿಸಿದ್ದರು. ಎ.ಎನ್. ಸೋಮಯ್ಯ ಅವರು ತಮ್ಮ ೬೮ನೇ ವಯಸ್ಸಿನಲ್ಲಿ (೨೯.೧೨.೧೯೮೮) ನಿಧನರಾದರು. ೧೯೭೦ರ ದಶಕದಲ್ಲೇ ಕೊಡಗು ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಪ್ರಭಾವಿಯಾಗಿದ್ದ ಅಜ್ಜಿಕುಟ್ಟಿರ ಎನ್. ಸೋಮಯ್ಯ ವೀರಾಜಪೇಟೆ ತಾಲೂಕು ಬೋರ್ಡ್ ಅಧ್ಯಕ್ಷ ಸ್ಥಾನದಿಂದ ವಿಧಾನಪರಿಷತ್ ಮೆಟ್ಟಿಲೇರಿದ್ದು ಕೊಡಗು ಜಿಲ್ಲೆಯ ರಾಜಕೀಯದ ಇತಿಹಾಸದಲ್ಲಿ ಅಪೂರ್ವ ಬೆಳವಣಿಗೆ.
(ಮುಂದುವರಿಯುವುದು)
- ಕೆ.ಎಂ. ಇಸ್ಮಾಯಿಲ್ ಕಂಡಕರೆ