ಪೊನ್ನಂಪೇಟೆ, ಫೆ. ೧: ಇತ್ತೀಚೆಗೆ ಬೆಂಗಳೂರಿನ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಅಕಾಡೆಮಿ ವತಿಯಿಂದ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಆಲ್ ಇಂಡಿಯಾ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಟೂರ್ನಮೆಂಟ್‌ನಲ್ಲಿ ಕೊಡಗಿನ ಮಹಿಳಾ ತಂಡ, ೫೫ ವರ್ಷ ವಯೋಮಿತಿಯ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ೫೦ ವರ್ಷ ವಯೋಮಿತಿಯ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದೆ.
ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದ ಆಟಗಾರರು ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ಕೂಡಿದ್ದ, ಗುಣಶೀಲಾ ಅಮರ್ ನಾಥ್ ನಾಯಕತ್ವದ ಕೊಡಗಿನ ತಂಡದಲ್ಲಿ ಮಂಡೆಪAಡ ಡಾ. ಪುಷ್ಪ ಕುಟ್ಟಣ್ಣ, ಪಳಂಗAಡ ವಾಣಿ ಚಂಗಪ್ಪ, ಕೊಳ್ಳಿಮಾಡ ರಶ್ಮಿ ಅಯ್ಯಪ್ಪ, ಬಲ್ಯಮೀದೇರಿರ ಆಶಾ ಶಂಕರ್, ತಾತಂಡ ಜ್ಯೋತಿ ಪ್ರಕಾಶ್, ತೀತರಮಾಡ ಕಾವೇರಿ ಅಚ್ಚಯ್ಯ, ಕಲಿಯಂಡ ಡಾ. ರೇಷ್ಮಾ ಚಂಗಪ್ಪ, ಕಾಡ್ಯಮಾಡ ದಿವ್ಯಾ ಪೂಣಚ್ಚ, ಪೊನ್ನಚಂಡ ಸಬಿತಾ ಪೂಣಚ್ಚ, ಐನಂಡ ಜಮುನಾ ಚಂಗಪ್ಪ, ಚೋವಂಡ ಜಮುನಾ ತಮ್ಮಯ್ಯ, ಕೋಣೇರಿರ ಶಿಲ್ಪಾ ಪೆಮ್ಮಯ್ಯ, ತಂಡದ ವ್ಯವಸ್ಥಾಪಕಿ ಕೋದೆಂಗಡ ರೇಷ್ಮಾ ನಂಜಪ್ಪ ಭಾಗವಹಿಸಿದ್ದರು.