ನಾಪೋಕ್ಲು, ಫೆ. ೧: ಇಲ್ಲಿಗೆ ಸಮೀಪದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಪುಟಾಣಿ ವಿಜ್ಞಾನ ಪರೀಕ್ಷೆಯಲ್ಲಿ ಸಾಧನೆ ಮಾಡಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪುಟಾಣಿ ವಿಜ್ಞಾನ ಬಳಗದವರು ನಡೆಸಿದ ರಾಷ್ಟçಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಚೇರಂಬಾಣೆ ಕೊಟ್ಟೂರು ರಾಜ ರಾಜೇಶ್ವರಿ ಶಾಲೆಯ ಒಟ್ಟು ೬೮ ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣ ರಾಗಿದ್ದಾರೆ. ಈ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಚಕ್ಷ ಕಾವೇರಮ್ಮ ರಾಷ್ಟçಮಟ್ಟದಲ್ಲಿ ಮೂರನೇ ಸ್ಥಾನ, ರಾಜ್ಯ ಮಟ್ಟದಲ್ಲಿ ೮ನೇ ತರಗತಿಯ ಭುವನ್ ಟಿ.ಡಿ. ೬ನೇ ಸ್ಥಾನ, ೯ನೇ ತರಗತಿಯ ಮಂಜುಳ ಹೆಚ್.ಎಲ್. ೬ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ ೧೦ನೇ ತರಗತಿಯ ಮೋಕ್ಷ ಬೋಪಣ್ಣ ೫ನೇ ಸ್ಥಾನ, ೯ ನೇ ತರಗತಿಯ ತ್ರಿಶ ಕೆ.ಜೆ ೭ನೇ ಸ್ಥಾನ, ತಾಲೂಕು ಮಟ್ಟದಲ್ಲಿ ೧೦ನೇ ತರಗತಿಯ ಇಂಚರ ಕೆ.ಕೆ. ೫ನೇ ಸ್ಥಾನ ೮ನೇ ತರಗತಿಯ ಪ್ರೇಕ್ಷ ಪೊನ್ನಮ್ಮ ೫ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.