ಮಾನ್ಯರೇ,
ವಿಶೇಷ ಆಚಾರ - ವಿಚಾರ - ಸಂಸ್ಕೃತಿಗೆ ಹೆಸರಾಗಿರುವ ಈ ನಾಡಿನಲ್ಲಿ ಆಹಾರದಲ್ಲೂ ವಿಶೇಷತೆ ಇದೆ. ಬಹಳಷ್ಟು ಮಂದಿ ಮಹಿಳೆಯರು- ಪುರುಷರು ಬಗೆಬಗೆಯ ಶುಚಿ-ರುಚಿಯಾದ ವಿಶೇಷ ತಿನಿಸುಗಳನ್ನು ತಯಾರಿಸುವವರಿದ್ದಾರೆ. ಹಾಗಾಗಿ ನೀವುಗಳು ಮಾಡುವ ವಿಶೇಷ ಅಡುಗೆಗಳನ್ನು ನಾಡಿನ ಓದುಗರಿಗೂ ಪರಿಚಯಿಸಲು, ನಿಮ್ಮನ್ನೂ ಕೂಡ ಪರಿಚಯಿಸಿಕೊಳ್ಳಲು ‘ಶಕ್ತಿ’ ಮೂಲಕ ಅವಕಾಶ ನೀಡಲಾಗುತ್ತಿದೆ.
ನೀವು ಮಾಡಬೇಕಾಗಿರುವುದು ಇಷ್ಟೇ..., ನಿಮಗೆ ತಿಳಿದಿರುವ ವಿಶೇಷ ತಿನಿಸುಗಳನ್ನು ತಯಾರಿಸುವ ವಿಧಾನ, ಬೇಕಾಗುವಂತಹ ಸಾಮಗ್ರಿಗಳ ಬಗ್ಗೆ ನಮಗೆ ೧೫೦ ಪದಗಳಿಗೆ ಮೀರದಂತೆ ಬರೆದು ಕಳುಹಿಸಿ. ಶನಿವಾರದ ‘ಅಡುಗೆಮನೆ’ ಅಂಕಣದಲ್ಲಿ ನಿಮ್ಮ ರುಚಿಯಾದ ಅಡುಗೆಯ ವಿವರವನ್ನು ಪ್ರಕಟಿಸಲಾಗುತ್ತದೆ. ನಿಮ್ಮ ಬರಹಗಳನ್ನು ಸಂಪಾದಕರು, ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ ಇಲ್ಲಿಗೆ ಅಥವಾ ಇ-ಮೇಲ್:shಚಿಞಣhiಜಚಿiಟಥಿ@gmಚಿiಟ.ಛಿom ಅಥವಾ ವಾಟ್ಸಾö್ಯಪ್ ಸಂಖ್ಯೆ ೭೪೮೩೫೬೩೭೫೬ಗೆ ಕಳುಹಿಸಬಹುದು.
-ಜಿ. ಚಿದ್ವಿಲಾಸ್, ಸಂಪಾದಕ.