ಮಡಿಕೇರಿ, ಫೆ. ೧: ಹಿಂದೂ ಸಮಾಜವು ಮಾಡುವ ಸೇವೆಯಲ್ಲಿ ಯಾವುದೇ ಸ್ವಾರ್ಥ ಉದ್ದೇಶ ಇರುವುದಿಲ್ಲ ಎಂಬುದಾಗಿ ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ ಧೋ ಕೇಶವಮೂರ್ತಿ ಅವರು ಹೇಳಿದರು. ಮಡಿಕೇರಿ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರುಗಳ ಜನ್ಮದಿನದ ಅಂಗವಾಗಿ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಯುವ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ದೇವಸ್ಥಾನಗಳಲ್ಲಿ ಅನ್ನದಾನ ಎಂಬ ಸೇವಾಕಾರ್ಯ ನಡೆಯುತ್ತದೆ. ಆದರೆ ಯಾವುದೇ ದೇವಸ್ಥಾನವೂ ಅನ್ನದಾನ ಮಾಡಿ ಫಲಾಪೇಕ್ಷೆ ಬಯಸುವುದಿಲ್ಲ. ಸೇವೆ ಮತ್ತು ತ್ಯಾಗದ ಮೇಲೆಯೇ ಹಿಂದೂ ಸಮಾಜ ನಿಂತಿದೆ. ಇದನ್ನು ಉಳಿಸಲು ಇಂದು ಹೋರಾಟದ ಅವಶ್ಯಕತೆ ಇದೆ. ಪ್ರಸ್ತುತ ನಮ್ಮ ಸಮಾಜದಲ್ಲಿ ಹಲವಾರು ಸವಾಲುಗಳಿವೆ. ಭೂಕಬಳಿಕೆ ಯತ್ನ, ಗೋವುಗಳ ಹತ್ಯೆ, ಮಾದಕ ವಸ್ತುವಿನ ಸಮಸ್ಯೆ ಹಾಗೂ ಹಿಂದೂ ಸಂಸ್ಕೃತಿಯ ಮೇಲೆ ನಿರಂತರವಾಗಿ ಟೀಕೆ ನಡೆಯುತ್ತಿದೆ.

ಅಫ್ಘಾನಿಸ್ತಾನ, ಪಾಕಿಸ್ತಾನ, ಸಿರಿಯಾ ಹಾಗೂ ಇತರ ದೇಶಗಳಲ್ಲಿ ನಿರಂತರ ಗಲಭೆಗಳು ನಡೆಯುತ್ತಿವೆ. ಟೆಕ್ ದಿಗ್ಗಜ ದೇಶ ಅಮೇರಿಕಾಗೆ ಚೀನಾ ಸವಾಲೊಡ್ಡುತ್ತಿದೆ. ಪೆಟ್ರೋಲಿ ಯಮ್ ಇಂಧನಕ್ಕೆ ಪ್ರಖ್ಯಾತಿ ಪಡೆದಿರುವ ದೇಶಗಳು ಪೆಟ್ರೋಲಿ ಯಮ್ ಖಾಲಿಯಾದರೆ ಮುಂದೇನು ಎಂಬ ಚಿಂತನೆಯಲ್ಲಿವೆ. ಎಲ್ಲ ದೇಶಗಳು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ದಾರಿಯನ್ನು ಹುಡುಕುತ್ತಿವೆ. ಆದರೆ ಹಿಂದೂ ಸಮಾಜದವರು ಎಲ್ಲ ತಿಳಿದಿದ್ದರೂ ಸುಮ್ಮನಿದ್ದಾರೆ. ಹಿಂದೂ ಸಮಾಜವು ಬಲಿಷ್ಠವಾದಲ್ಲಿ ಮಾತ್ರ ಭಾರತವು ಜಾಗೃತವಾಗಲು ಸಾಧ್ಯ ಎಂದರು.

ಯುವ ಜನಾಂಗಕ್ಕೆ ಮಾದರಿಯಾಗಿದ್ದ ವಿವೇಕಾನಂದರು, ಇಡೀ ಭಾರತವೇ ವಿಶ್ವದ ನಿವಾಸಿ ಗಳನ್ನು ಅಣ್ಣ, ತಮ್ಮ, ಅಕ್ಕ, ತಂಗಿಯಾಗಿ ಪರಿಗಣಿಸಿ ಒಂದೇ ಕುಟುಂಬದAತೆ ಕಾಣುತ್ತದೆ ಎಂಬ ಮನೋಭಾವನೆ ಯನ್ನು ವಿದೇಶಿಗರಲ್ಲಿ ಸೃಷ್ಟಿಸಿದ್ದರು. ಸಹಸ್ರಾರು ಮಂದಿಯನ್ನು ಸೇರಿಸಿ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಹುಟ್ಟು ಹಾಕಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಬ್ರಿಟಿಷರ ಶತ್ರು ರಾಷ್ಟçಗಳ ಜೊತೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕೈಜೋಡಿಸಿ ಸಾಹಸ ಮೆರೆದರು. ಇವರುಗಳನ್ನು ಆದರ್ಶವಾಗಿರಿಸಿಕೊಂಡು ಹಿಂದೂ ಜನಾಂಗದವರು ಜಾಗರೂಕರಾದರೆ ಭಾರತವೂ ಜಾಗೃತವಾಗುತ್ತದೆ ಎಂಬು ದಾಗಿ ಅವರು ಅಭಿಪ್ರಾಯಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಯಡವನಾಡು ಗ್ರಾಮದ ಹೇಮಂತ್ ಪಾರೇರ ಅವರು, ವಿವೇಕಾನಂದರ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರುಗಳ ಕುರಿತು ಮಾತನಾಡಿದರು. ಜಾತಿ-ಜನಾಂಗ ವ್ಯವಸ್ಥೆಯಿಂದ ಹೊರ ಬಂದು ಹಿಂದೂ ಜನಾಂಗವು ಒಟ್ಟಾಗ ಬೇಕೆಂದು ಈ ಸಂದರ್ಭ ಅವರು ಕರೆ ನೀಡಿದರು. ವೇದಿಕೆಯಲ್ಲಿ ಹಿಂ.ಜಾ.ವೇ ಪ್ರಾಂತ ಟ್ರೋಳಿ ಸದಸ್ಯ ಅಜಿತ್ ಕುಕ್ಕೆರ, ಜಿಲ್ಲಾ ಯುವ ವಾಣಿ ಪ್ರಮುಖ್ ಸುನಿಲ್ ಮಾದಪ್ಪ, ಮಡಿಕೇರಿ ತಾಲೂಕು ಸಂಯೋಜಕ ದುರ್ಗೇಶ್ ಅವರುಗಳು ಹಾಜರಿದ್ದರು. ದುರ್ಗೇಶ್ ಅವರು ಸ್ವಾಗತಿಸಿದರು. ಪ್ರಮುಖರಾದ ವಿನಯ್ ಕಾರ್ಯಕ್ರಮ ನಿರೂಪಿಸಿದರು. ಚರಣ್ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಬೈಕ್ ಜಾಥಾ ನಡೆಯಿತು. ಚೌಡೇಶ್ವರಿ ದೇವಾಲಯದಿಂದ ಪ್ರಾರಂಭವಾದ ಜಾಥಾ, ಅಂಚೆ ಕಚೇರಿ, ಎಫ್.ಎಂ. ಕಾರ್ಯಪ್ಪ ವೃತ್ತದ ಮೂಲಕ ಮಂಗೇರಿರ ಮುತ್ತಣ್ಣ ವೃತ್ತವಾಗಿ ಓಂಕಾರೇಶ್ವರ ದೇವಾಲಯದ ಮಾರ್ಗವಾಗಿ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಸಮಾಪ್ತಿಗೊಂಡಿತು.