ಮಡಿಕೇರಿ, ಫೆ. ೨: ಅನುದಾನಿತ ಶಾಲಾ ಕಾಲೇಜು ನೌಕರರಿಗೆ ೨೦೦೬ ನಂತರದಲ್ಲಿ ನೇಮ ಕಾತಿಯಾದವರಿಗೆ ಸರ್ಕಾರವು ನಿವೃತ್ತಿಯ ನಂತರ ಪಿಂಚಣಿ ಯೋಜನೆ ಯನ್ನು ರದ್ದುಗೊಳಿಸಿದೆ. ನಿವೃತ್ತಿಯ ನಂತರ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಪಿಂಚಣಿ ಸೌಲಭ್ಯಗಳಿಲ್ಲದೆ ಜೀವನ ಕಷ್ಟಕರವಾಗಲಿದ್ದು ಸರ್ಕಾರ ಕೂಡಲೇ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕೊಡಗಿನ ಎಲ್ಲಾ ಅನುದಾನಿತ ಶಾಲಾ ಕಾಲೇಜು ನೌಕರರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿಯನ್ನು ನಡೆಸಿದ್ದಾರೆ.

ಸೋಮವಾರಪೇಟೆಯಲ್ಲಿ ಪತ್ರ ಚಳವಳಿಗೆ ಚಾಲನೆ ನೀಡಿ ಮಾತನಾಡಿದ ಕೊಡಗು ಜಿಲ್ಲಾ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಅಧ್ಯಕ್ಷರಾದ ಪಡಿಞರಂಡ ಪ್ರಭುಕುಮಾರ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸರ್ಕಾರ ಚುನಾವಣಾ ಪೂರ್ವದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಒಂದಾಗಿದ್ದು ಆದಷ್ಟು ಬೇಗ ನಮ್ಮ ಬೇಡಿಕೆಯನ್ನು ಈಡೇರಿಸಿ ನೌಕರರ ಬದುಕಿಗೆ ದಾರಿದೀಪವಾಗಬೇಕೆಂದು ಒತ್ತಾಯಿಸಿದರು.