ಸೋಮವಾರಪೇಟೆ, ಫೆ. ೨ : ನಾವು ಪ್ರತಿಷ್ಠಾನದ ಮಕ್ಕಳ ಹಕ್ಕುಗಳ ಅರಿವು ಮತ್ತು ಕಲಿಕಾ ಕೇಂದ್ರಕ್ಕೆ ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ನ ಕಾರ್ಯಕಾರಿ ನಿರ್ದೇಶಕರು ಹಾಗು ಮಕ್ಕಳ ಹೋರಾಟಗಾರ ಡಾ. ಎನ್.ವಿ. ವಾಸುದೇವ ಶರ್ಮಾ ಇತ್ತೀಚೆಗೆ ಭೇಟಿ ನೀಡಿ ಮಕ್ಕಳ ಹಕ್ಕುಗಳ ಬಗೆಗಿನ ಭಿತ್ತಿಪತ್ರ ಅನಾವರಣಗೊಳಿಸಿದರು.
ಮಕ್ಕಳ ಗ್ರಾಮಸಭೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದ ಶರ್ಮಾ ಅವರು, ಮಕ್ಕಳ ಗ್ರಾಮಸಭೆಗಳ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ, ಸರ್ಕಾರ ಮಕ್ಕಳ ಗ್ರಾಮಸಭೆ ಮತ್ತು ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಮಕ್ಕಳ ಪರವಾಗಿ ಪ್ರಚಾರ, ವಕೀಲಿ,ಗ್ರಂಥಾಲಯ ಮತ್ತು ಸ್ವಯಂ ಅರಿವು ಕೇಂದ್ರದ ಮೂಲಕ ಮಕ್ಕಳ ಪರ ಕೆಲಸದಲ್ಲಿ ತೊಡಗಿರುವ ನಾವು ಪ್ರತಿಷ್ಠಾನ ತಂಡದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚೈಲ್ಡ್ ರೈಟ್ಸ್ನ ಲಕ್ಷಿö್ಮÃಶರ್ಮಾ, ರತ್ನಮಾಲಾ, ನಾವು ಪ್ರತಿಷ್ಠಾನ ಸಂಸ್ಥೆಯ ಮುಖ್ಯಸ್ಥರಾದ ಗೌತಮ್ ಕಿರಗಂದೂರು, ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯೂ, ಪ್ರಮುಖರಾದ ಸವಿತಾ, ಶಶಿಕುಮಾರ್, ಪ್ರಜ್ವಲ್, ಬಿ.ಕೆ.ಕುಮಾರಿ, ವಿಕ್ರಂಸಾಗರ್ ಇದ್ದರು.