ಕಣಿವೆ, ಫೆ. ೨: ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಮಾರಕವಾ ಗಿರುವ ಮೊಬೈಲ್ ಎಂಬ ಮಾಯಾಪೆಟ್ಟಿ ಗೆಯನ್ನು ದೂರವಿಟ್ಟು ಪುಸ್ತಕ ಹಿಡಿದು ಅಧ್ಯಯನ ಮಾಡುವ ಮೂಲಕ ಜ್ಞಾನವಂತರಾಗಲು ನಿವೃತ್ತ ಪ್ರಾಂಶುಪಾಲ ಡಾ.ದೇವರಾಜು ಕರೆಕೊಟ್ಟರು.
ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಜ್ಞಾನಕ್ಕೆ ಇರುವ ಬೆಲೆ ಹಣಕ್ಕಿಲ್ಲ. ಹಣವಂತನನ್ನು ಎಲ್ಲಿಯೂ ಯಾರೂ ಕೂಡ ಸತ್ಕರಿಸಿದ ಉದಾಹರಣೆ ಇಲ್ಲ. ಅದೇ ಕಠಿಣ ಪರಿಶ್ರಮದ ಮೂಲಕ ಜ್ಞಾನವಂತರಾದರೆ ಸಮಾಜವೇ ತನ್ನ ಬಳಿ ಬಂದು ಗೌರವಿಸುತ್ತದೆ. ಹಳ್ಳಿಗಾಡಿನಲ್ಲಿ ಪೋಷಕರು ಇಂದಿಗೂ ಕೂಡ ಕಷ್ಟಪಟ್ಟು ಮಕ್ಕಳನ್ನು ಒಳ್ಳೆಯ ಕಾಲೇಜುಗಳಲ್ಲಿ ಓದಿಸುತ್ತಿದ್ದಾರೆ. ಮಕ್ಕಳು ಪೋಷಕರ ಹಣಕಾಸಿನ ಸ್ಥಿತಿ ಗತಿ ಅರಿಯಬೇಕು ಎಂದರು.
ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿದ ಹೊಸ ಕಟ್ಟಡದಲ್ಲಿ ನವೀಕೃತ ಜೀವಶಾಸ್ತç ಪ್ರಯೋಗಾಲಯ ಉದ್ಘಾಟಿಸಿದ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಿಕಾ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳ ಪಾಲಿಗೆ ದ್ವಿತೀಯ ಪಿಯುಸಿ ಇಡೀ ಜೀವನದ ದಿಕ್ಕನ್ನೇ ಬದಲಿಸುವ ಪ್ರಮುಖ ಘಟ್ಟವಾಗಿದ್ದು, ಸತತ ಅಧ್ಯಯನ, ಏಕಾಗ್ರತೆ, ಹಾಗೂ ನಿರಂತರ ಸಂವಹನಗಳಿAದ ಗುರಿ ಸಾಧಿಸಬಹುದಾಗಿದೆ ಎಂದರು.
ಕಾಲೇಜಿನ ಗೌರವ ಪ್ರಾಂಶುಪಾಲ ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟ ಹಾಗೂ ದುರಭ್ಯಾಸಗಳಿಂದ ದೂರವಿದ್ದು ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಶೈಕ್ಷಣಿಕವಾಗಿ ಸಾಧನೆ ಹೊಂದಬೇಕಿದೆ ಎಂದರು. ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕಗಳೊAದಿಗೆ ವೈದ್ಯಕೀಯ ಶಿಕ್ಷಣ ಪೂರೈಸಿ ಕೂಡಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡ ಡಾ.ದೀಪಿಕಾ ಮೂರ್ತಿ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ವಿದ್ಯುತ್ ಅಲಂಕೃತ ವೇದಿಕೆಯಲ್ಲಿ ವೈವಿಧ್ಯಮಯವಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು. ಪಿಯು ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಪದವಿ ವಿಭಾಗದ ಪ್ರಾಂಶುಪಾಲೆ ಲಿಖಿತಾ, ಕಾಲೇಜಿನ ಅಧೀಕ್ಷಕ ಎನ್.ಎನ್. ನಂಜಪ್ಪ, ಮಹೇಶ್ ಅಮೀನ್, ಹಿರಿಯ ಉಪನ್ಯಾಸಕರಾದ ವಿಕ್ರಂ, ಮಂಜುನಾಥ್, ನಮಿತಾ, ಸೌಮ್ಯಶ್ರೀ, ಮೇರಿಪ್ರಿಯಾ, ಸ್ವಾಮಿಗೌಡ ಮೊದಲಾದವರಿದ್ದರು. ವಿದ್ಯಾರ್ಥಿನಿ ರಿಲಾ ಸಾರಮ್ಮ ಹಾಗೂ ಕೀರ್ತನಾ ನಿರೂಪಿಸಿ, ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಸ್ವಾಗತಿಸಿ, ರಶ್ಫಾ ವಂದಿಸಿದರು.