ಚೆಯ್ಯಂಡಾಣೆ, ಫೆ. ೨: ಮೈಸೂರಿನ ಸಾಯಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಪಂಚಶೀಲ್ ಚಾರಿಟೇಬಲ್ ಟ್ರಸ್ಟ್ ಸಹ ಯೋಗದೊಂದಿಗೆ ಅಮೀನಾಸ್ ಡ್ರಿಮ್ಸ್ ವರ್ಲ್ಡ್ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷಚೇತನರಿಗೆ ವೀಲ್‌ಚೇರ್ ಹಾಗೂ ವಸ್ತç ವಿತರಣಾ ಕಾರ್ಯಕ್ರಮ ನಡೆಯಿತು.

ಚೆನ್ನಂಗೊಲ್ಲಿ ಗ್ರಾಮದ ಸಮುದಾಯ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೀನಾಸ್ ಡ್ರಿಮ್ಸ್ ವರ್ಲ್ಡ್ ಕೊಡಗು ಅಧ್ಯಕ್ಷೆ ಲೀಲಾ ವಹಿಸಿದ್ದರು.

ಕಾರ್ಯಕ್ರಮವನ್ನು ಮುಖ್ಯ ಅತಿಥಿ ಶ್ರೀ ಶಕ್ತಿ ಸಂಘದ ಅಧ್ಯಕ್ಷೆ ರಜಿನಿ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನಿರ್ಗತಿಕರಿಗೆ, ಬಡವರಿಗೆ, ವಿಶೇಷಚೇತನರಿಗೆ ಬೆನ್ನೆಲುಬಾಗಿರುವುದು ಶ್ಲಾಘನೀಯ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಎರ್ಮು ಹಾಜಿ ಪೊನ್ನಪೇಟೆ ಮಾತನಾಡಿ, ಮುಸ್ಲಿಂ ಸಮುದಾಯದ ಎಲ್ಲಾ ಸಂಘ-ಸAಸ್ಥೆ ಸೇರಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಂತಸ ತಂದಿದೆ, ಇದಕ್ಕೆ ಎಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕೆಂದರು.

ಸಾಯಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ರಾಜಾರಾಮನ್, ರೋಟರಿ ಪಂಚಶೀಲ್ ಚಾರಿಟೇಬಲ್ ಟ್ರಸ್ಟ್ನ ಕಿರಣ್, ತನಲ್ ಆಶ್ರಮದ ಮೊಹಮ್ಮದ್, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಶಬರಿ, ಅಮೀನಾಸ್ ಡ್ರೀಮ್ಸ್ ವಲ್ಡ್ ಕೊಡಗು ಇದರ ಕಾನೂನು ಸಲಹೆಗಾರರಾದ ರಫೀಕ್ ಮತ್ತಿತರರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಅಮೀನಾಸ್ ಡ್ರಿಮ್ಸ್ ವರ್ಲ್ಡ್ ಕೊಡಗು ಇದರ ಸ್ಥಾಪಕಿ ಅಮೀನಾ ಪ್ರ‍್ರಾಸ್ತಾವಿಕವಾಗಿ ಮಾತನಾಡಿದರು. ಚೆನ್ನಂಗೊಲ್ಲಿ ಗ್ರಾಮದ ವಿಶೇಷಚೇತನ ಯುವತಿ ಅನಿತಾ ಹಾಗೂ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ಕೊಡಗು ಇವರಿಗೆ ವೀಲ್‌ಚೇರ್‌ಗಳನ್ನು ಅತಿಥಿಗಳು ಹಸ್ತಾಂತರಿಸಿದರು.

ಈ ಸಂದರ್ಭ ಅಮೀನಾಸ್ ಡ್ರಿಮ್ಸ್ ವರ್ಲ್ಡ್ ಪದಾಧಿಕಾರಿಗಳಾದ ಲೀಲಾ, ಸುಮಯ್ಯ, ಸರಸು, ದಿವಿನ, ತೌಫೀಕ್, ರಶೀದಾ, ಅನುಪಮಾ, ಕುಟ್ಟು, ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ನ ಸೈಫುದ್ದಿನ್ ಚಾಮಿಯಾಲ, ಹ್ಯಾರಿಸ್ ಕೊಂಡAಗೇರಿ, ಉಮ್ಮರ್ ಎಡಪಾಲ, ಮತ್ತಿತರರು ಉಪಸ್ಥಿತರಿದ್ದರು. ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶೀಲಾ ಸ್ವಾಗತಿಸಿ, ವಂದಿಸಿದರು.