ಶನಿವಾರಸಂತೆ, ಫೆ. ೨: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು-ಬೆಸೂರು ಗ್ರಾಮದ ಶ್ರೀಬಾಲ ತ್ರಿಪುರ ಸುಂದರಿ ಕ್ಷೇತ್ರದಲ್ಲಿ ಭಾನುವಾರ ಶ್ರೀಬಾಲ ತ್ರಿಪುರ ಸುಂದರಿ ದೇವಿ ಅಮ್ಮನವರ ೧೨ ನೇ ವರ್ಷದ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ಜರುಗಿತು.

ಬೆಳಿಗ್ಗೆ ಅರ್ಚಕರಾದ ಸುನೀಲ್ ಹಾಗೂ ದರ್ಶನ್ ನೇತೃತ್ವದಲ್ಲಿ ನಿರ್ಮಲಾ ದರ್ಶನ, ಪ್ರಸನ್ನ ಪೂಜೆ, ಅಭಿಷೇಕ, ಮಹಾಗಣಪತಿ ಹೋಮ ನಡೆಯಿತು. ನಂತರ ಸರ್ವರ ನೆಮ್ಮದಿ-ಶಾಂತಿಗಾಗಿ ಪ್ರತ್ಯಂಗಿರಾ ಹೋಮ(ಮೆಣಸಿನಕಾಯಿ + ಕೊಬ್ಬರಿ ಹೋಮ) ನಡೆದು ಭಕ್ತಾದಿಗಳು ಕೆಂಪು ಮೆಣಸಿನಕಾಯಿ ಹಾಗೂ ಕೊಬ್ಬರಿಯನ್ನು ಹೋಮಕುಂಡಕ್ಕೆ ಅರ್ಪಿಸಿ ನಮಿಸಿದರು. ಶ್ರೀಬಾಲ ತ್ರಿಪುರಸುಂದರಿ ಅಮ್ಮನವರು, ಶ್ರೀಗಣಪತಿ, ಸ್ತಿçÃಯರು ಮಾತ್ರ ಪೂಜಿಸುವ ಅಮ್ಮನವರ ಮೂಲ ಸನ್ನಿಧಿ, ಶ್ರೀನಾಗದೇವತೆ, ಶ್ರೀಈಶ್ವರ ಹಾಗೂ ಶ್ರೀಚೌಡೇಶ್ವರಿ ದೇವಿಯ ದರ್ಶನ ಪಡೆದು ಹಣ್ಣುಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ತೀರ್ಥಪ್ರಸಾದ ವಿನಿಯೋಗದೊಂದಿಗೆ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು.

ಮಧ್ಯಾಹ್ನದ ನಂತರ ದೇವಾಲಯದಿಂದ ಅಮ್ಮನವರ ಕಳಶವನ್ನು ಅಡ್ಡೆಯಲ್ಲಿರಿಸಿ ಮೆರವಣಿಗೆಯಲ್ಲಿ ಹೇಮಾವತಿ ಹೊಳೆಗೆ ತೆರಳಿ ಕಳಶೋತ್ಸವ ನಡೆಯಿತು. ಬಳಿಕ ವೀರಗಾಸೆ, ವಾದ್ಯಗೋಷ್ಟಿಯೊಂದಿಗೆ ಅಮ್ಮನವರ ಕಳಶವನ್ನು ದೇವಸ್ಥಾನಕ್ಕೆ ತರಲಾಯಿತು. ಸಂಜೆ ಶ್ರೀ ಚೌಡೇಶ್ವರಿ ಸನ್ನಿಧಿ ಬಳಿ ಕೆಂಡೋತ್ಸವ ನಡೆದು; ಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಯಿತು.

ಶ್ರೀಬಾಲ ತ್ರಿಪುರ ಸುಂದರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮ ಪ್ರಮುಖರು ಹಾಜರಿದ್ದರು. ಸುತ್ತಮುತ್ತಲಿನ ೪೮ ಗ್ರಾಮಗಳ ಸಾವಿರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

ತಾ.೩ರAದು ಶ್ರೀಬಾಲ ತ್ರಿಪುರ ಸುಂದರಿ ದೇವಿ ಅಮ್ಮನವರ ದೇವಸ್ಥಾನದ ಬಾಗಿಲು ಒಂದು ದಿನ ಮುಚ್ಚಲ್ಪಡುತ್ತದೆ. ಕ್ಷೇತ್ರದ ಶ್ರೀ ಚೌಡೇಶ್ವರಿ ದೇವಿಗೆ ವರ್ಷಕ್ಕೊಮ್ಮೆ ನಡೆಯುವ ಬಲಿಪೂಜೆ ನಡೆಯುತ್ತದೆ.