ಕುಶಾಲನಗರ, ಫೆ. ೨: ಕುಶಾಲ ನಗರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು ಪಥಸಂಚಲನ ನಡೆಸಿದರು. ಬೈಚನಹಳ್ಳಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಮೂಲಕ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಸಾಗಿ, ದಂಡಿನಪೇಟೆ, ಮೈಸೂರು ರಸ್ತೆ, ರಥ ಬೀದಿಯಲ್ಲಿ ಸಾಗಿ ಕುಶಾಲನಗರ ಡಿವೈಎಸ್ಪಿ ಕಚೇರಿ ತನಕ ಸಂಚರಿಸಿದರು.
ಸಾರ್ವಜನಿಕರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ತಿಳಿಸಿದರು. ಬೆಳಗಾವಿ ಯೂನಿಟ್‌ನ ೯೭ನೇ ಬೆಟಾಲಿಯನ್‌ನ ೩೦ರ ಯೋಧರು ಸಹಾಯಕ ಕಮಾಡೆಂಟ್ ಅನಿಲ್ ಜಾದವ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ಪಥಸಂಚಲನ ನಡೆಸಿದರು. ಡಿವೈಎಸ್ಪಿ ಆರ್.ವಿ. ಗಂಗಾಧ ರಪ್ಪ, ಕ್ಷಿಪ್ರಪಡೆಯ ನಿರೀಕ್ಷಕ ನರಸಿಂಹ ಮೂರ್ತಿ, ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಸಂಚಾರಿ ಠಾಣೆಯ ಠಾಣಾಧಿಕಾರಿ ಗಣೇಶ್, ನಗರ ಠಾಣಾಧಿಕಾರಿ ಗೀತ ಸೇರಿದಂತೆ ಸ್ಥಳೀಯ ಪೊಲೀಸರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.