ಚೆಯ್ಯಂಡಾಣೆ, ಫೆ. ೨: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಸ್ಥರಿಗೆ ಹೋಬಳಿ ಮಟ್ಟದ ಪಿಂಚಣಿ ಆದಾಲತ್ ಕಾರ್ಯಕ್ರಮ ನಡೆಯಿತು.
ಚೆಯ್ಯಂಡಾಣೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದ್ದರು.
ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ರಾಷ್ಟಿçÃಯ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಇದರಿಂದ ಹೋಬಳಿ ಮಟ್ಟದಲ್ಲಿರುವ ಪಿಂಚಣಿ ಫಲಾನುಭವಿಗಳಿಗೆ ಅನುಕೂಲ ವಾಗಲಿದೆ. ಯೋಜನೆಯಿಂದ ಪಿಂಚಣಿ ಫಲಾನುಭವಿಗಳು ಮಾಸಿಕ ಹಣ ಪಡೆಯುತ್ತಿದ್ದು, ಇದರಲ್ಲಿ ಕೆಲವರು ಅವರ ಆಧಾರ್ ಕಾರ್ಡ್ ಇಕೆವೈಸಿ ಮಾಡದೇ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡದ ಕಾರಣ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೋಬಳಿ ಮಟ್ಟದಲ್ಲಿ ಇಂತಹ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜನೆಯಿಂದ ಸಕಾಲದಲ್ಲಿ ಪಿಂಚಣಿ ವಂಚಿತರಿಗೆ ಸಮಸ್ಯೆ ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ, ಸರ್ಕಾರದಿಂದ ಆರೋಗ್ಯ ಸಮಸ್ಯೆಗೆ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಮಾಡಲಾಗಿದೆ. ಇದರಿಂದ ಒಬ್ಬ ರೋಗಿಗೆ ೫ ಲಕ್ಷದವರೆಗೆ ಆರೋಗ್ಯ ಸೇವೆಗೆ ಹಣ ಉಚಿತವಾಗಿ ಸರ್ಕಾರದಿಂದ ದೊರೆ ಯಲಿದೆ. ಆದ್ದರಿಂದ ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೊಡಗು ಜಿಲ್ಲಾ ಅಂಚೆ ಇಲಾಖೆಯ ಮಾರ್ಕೆಟಿಂಗ್ ಅಧಿಕಾರಿ ಸುದರ್ಶನ್ ಮಾತನಾಡಿ, ಅಂಚೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಫೆಬ್ರವರಿ ೮ ರಂದು ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ಆಧಾರ್ ಮೇಳ ನಡೆಯಲಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸರ್ಕಾರ ಪಿಂಚಣಿ ಸೌಲಭ್ಯವನ್ನು ಫಲಾನುಭವಿಗಳ ಮನೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ ಕೂಡ ನರಿಯಂದಡ ಗ್ರಾಮದ ವೃದ್ಧ ಮಹಿಳೆ ಗೌರಿ ಎಂಬವರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿ ವೃದ್ಧಾಪ್ಯ ವೇತನ ಪಿಂಚಣಿಗೆ ಅರ್ಜಿ ಸಲ್ಲಿಸಲು ಮಕ್ಕಳ ಸಹಾಯದಿಂದ ಪಿಂಚಣಿ ಅದಾಲತ್‌ಗೆ ನಡೆದುಕೊಂಡು ಬಂದ ದೃಶ್ಯ ಮನಕಲಕುವಂತಿತ್ತು. ಮುಂದಿನ ದಿನಗಳಲ್ಲಿ ವಯೋವೃದ್ಧರಿಗೆ, ಅಂಗವಿಕಲರಿಗೆ ಅನುಕೂಲ ವಾಗುವಂತೆ ಅಧಿಕಾರಿಗಳೇ ಖುದ್ದು ಅವರ ಮನೆಗಳಿಗೆ ತೆರಲಿ ಪಿಂಚಣಿ ಸೌಲಭ್ಯ ಒದಗಿಸಬೇಕೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂತು.
ವಿಶೇಷಚೇತನ ಪಿಂಚಣಿ, ವಿಧವೆ ಪಿಂಚಣಿ, ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಹಾಗೂ ಹೊಸ ಆಧಾರ್ ಕಾರ್ಡ್ ನೋಂದಣಿ, ಆಧಾರ್ ಕಾರ್ಡ್ ತಿದ್ದುಪಡಿ, ಆಯುಷ್ಮಾನ್ ಆರೋಗ್ಯ ವಿಮಾ ಕಾರ್ಡ್ ಸೌಲಭ್ಯ ಇನ್ನಿತರ ಸೌಲಭ್ಯಗಳನ್ನು ಸಾರ್ವಜನಿಕರು ಪಡೆದುಕೊಂಡರು. ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್ ಅಚ್ಚಯ್ಯ, ಮೊಹಮ್ಮದ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ನರಿಯಂದಡ ಗ್ರಾಮ ಲೆಕ್ಕಿಗರಾದ ಸ್ವಾತಿ, ಅರಪಟ್ಟು ಗ್ರಾಮ ಲೆಕ್ಕಿಗರಾದ ಅಮೃತ, ಗ್ರಾಮ ಸಹಾಯಕರಾದ ಸಂಜಯ್, ರಾಜ, ಗ್ರಾಮ ಒನ್ ಪ್ರತಿನಿಧಿ ಬೋಪಣ್ಣ, ಗ್ರಾ.ಪಂ. ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಸ್ವಾಗತಿಸಿ, ವಂದಿಸಿದರು.