ಸೋಮವಾರಪೇಟೆ, ಫೆ. ೨: ಭಾರತೀಯ ಸೇನೆಯಲ್ಲಿ ೧೯ ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಪಟ್ಟಣ ಸಮೀಪದ ತಾಕೇರಿ ಗ್ರಾಮದ ಎಸ್.ಡಿ. ತೇಜ ಅವರನ್ನು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಸಿ.ಕೆ. ಆರ್ಮಿ ಟ್ರೆöÊನಿಂಗ್ ಅಕಾಡೆಮಿಯಿಂದ ಸ್ವಾಗತಿ ಸಲಾಯಿತು.

ತಾಕೇರಿ ಗ್ರಾಮದ ಎಸ್.ಎಸ್. ದೇವಯ್ಯ ಹಾಗೂ ರಾಜಮ್ಮ ಅವರ ಪುತ್ರ ತೇಜ ಅವರು ೨೦೦೬ ರಲ್ಲಿ ಸೈನ್ಯಕ್ಕೆ ಸೇರಿ ಮಹಾರಾಷ್ಟç, ಹರಿಯಾಣ, ಜಮ್ಮುಕಾಶ್ಮೀರ, ಸಿಕಂದರಾಬಾದ್, ರಾಜಸ್ಥಾನ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದು ಊರಿಗೆ ಆಗಮಿಸಿದ ಸಂದರ್ಭ ಪಟ್ಟಣದಲ್ಲಿ ಅವರನ್ನು ಸ್ವಾಗತಿಸಲಾಯಿತು.

ಸಿ.ಕೆ. ಆರ್ಮಿ ಟ್ರೆöÊನಿಂಗ್ ಅಕಾಡೆಮಿಯ ತರಬೇತುದಾರ ಚಂದ್ರಕುಮಾರ್, ಅಕಾಡೆಮಿಯ ವಿದ್ಯಾರ್ಥಿಗಳು ಹಾಗೂ ತೇಜ ಅವರ ಸಹೋದರಿ ಛಾಯಾ, ಪತ್ನಿ ಕೆ.ಎಸ್. ಧನ್ಯಾ, ಸ್ಥಳೀಯರಾದ ವಿಜಯಕುಮಾರ್, ದೈವಿಕ್, ತನ್ವಿಕ್, ಮಾನ್ವಿ, ಘೃತ ಸೇರಿದಂತೆ ಇತರರು ಇದ್ದರು.