ಮಡಿಕೇರಿ, ಫೆ. ೨: ವೀರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಯಾವುದೇ ಊರ್ಜಿತ ದಾಖಲೆಗಳಿಲ್ಲದೆ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸುವ ಸಂದರ್ಭದಲ್ಲಿ ಮೊಕದ್ದಮೆಯನ್ನು ದಾಖಲಿಸಿ ವಾಹನ ಮತ್ತು ಸ್ವತ್ತುಗಳನ್ನು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡಿದ್ದು, ಈವರೆಗೂ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯದಿಂದ ಹಲವಾರು ಬಾರಿ ನೋಟೀಸು ಜಾರಿ ಮಾಡಿದರೂ ಸಹ ನ್ಯಾಯಾಲಯಕ್ಕೆ ವಾಹನ ಮಾಲೀಕರು ಹಾಜರಾಗಿರುವುದಿಲ್ಲ.
ಆದ್ದರಿಂದ ವಾಹನ ಸಂಖ್ಯೆ ಕೆಎ-೧೨ಎಂ-೫೧೫೬, ಕೆಎ-೧೨ಎಂ-೮೬೦, ಕೆಎ.೦೩-ಪಿ-೫೨೩೩, ಕೆಎ-೦೪-೧೪೯೪, ಕೆಎ-೧೨-೨೦೪೩, ಕೆಎ.೫೮-ಎಫ್-೧೫೯೫ ವಾಹನದ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ, ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ನ್ಯಾಯವಾದಿಗಳ ಮುಖಾಂತರ ಅಥವಾ ಖುದ್ದಾಗಿ ಸಂಪೂರ್ಣ ದಾಖಲಾತಿಗಳೊಂದಿಗೆ ಈ ಪ್ರಕಟಣೆಯು ಪ್ರಕಟಗೊಂಡ ೧೫ ದಿನಗಳೊಳಗಾಗಿ ತಮ್ಮ ಅಹವಾಲನ್ನು ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ವೀರಾಜಪೇಟೆ ವಿಭಾಗ, ವೀರಾಜಪೇಟೆ ಕಚೇರಿಗೆ ಸಲ್ಲಿಸಬೇಕಾಗಿದ್ದು, ಯಾವುದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ, ೧೯೬೩ ರ ವಿಧಿ ೭೧ (ಎ) ಯಿಂದ (ಜಿ) ಪ್ರಕಾರ ಈ ವಾಹನಗಳನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.