ಮಡಿಕೇರಿ, ಫೆ. ೨: ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಶಾಸಕರನ್ನು ಭೇಟಿಯಾದ ಒಕ್ಕೂಟದ ಪ್ರಮುಖರು ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಚರ್ಚಿಸಿದರು.
ಮಡಿಕೇರಿ-ತಲಕಾವೇರಿ ರಸ್ತೆಯ ದುರಸ್ತಿ ಕೈಗೊಳ್ಳಬೇಕು, ಮುಂದಿನ ರಾಜ್ಯ ಬಜೆಟ್ನಲ್ಲಿ ಮಡಿಕೇರಿ-ಭಾಗಮಂಡಲ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಕ್ರಮಕೈಗೊಳ್ಳಲು ಮುಖ್ಯಮಂತ್ರಿಗಳ ಗಮನ ಸೆಳೆಯಬೇಕೆಂದು ಶಾಸಕರಲ್ಲಿ ಒಕ್ಕೂಟದ ಪ್ರಮುಖರು ಮನವಿ ಮಾಡಿದರು. ಭೇಟಿ ಸಂದರ್ಭ ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಖಜಾಂಜಿ ಆನಂದ ಕರಂದ್ಲಾಜೆ, ಜಂಟಿ ಕಾರ್ಯದರ್ಶಿ ನವೀನ್ ಅಂಬೆಕಲ್, ಕುಶಾಲನಗರ ಯುವಕ ಸಂಘದ ಅಧ್ಯಕ್ಷ ಹರ್ಷ ಕೊಡಗನ, ಕೊಡಗು ಗೌಡ ಯುವ ವೇದಿಕೆಯ ರೋಷನ್ ಕೊಂಬಾರನ ಹಾಜರಿದ್ದರು.