ಚೆಯ್ಯಂಡಾಣೆ, ಫೆ. ೨: ನಾಪೋಕ್ಲು ಬಳಿಯ ಹಳೇತಾಲೂಕಿನ ಅಲ್ ಅಮೀನ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾದ ೬ನೇ ವರ್ಷದ ಹಳೇತಾಲೂಕು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಕೆಆರ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ಹರೀಶ್ ಮಾಲೀಕತ್ವದ ಹೆಚ್‌ಎಂಎಸ್ ತಂಡವನ್ನು ಮಣಿಸಿ ಸನಾವುಲ್ಲಾ ಮಾಲೀಕತ್ವದ ಕೆಕೆಆರ್ ತಂಡ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿತು. ಎಚ್‌ಎಂಎಸ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪAದ್ಯಾಟದಲ್ಲಿ ಹಳೇ ತಾಲೂಕು ವ್ಯಾಪ್ತಿಯ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ತಬ್ಶೀರ್ ಪಡೆದುಕೊಂಡರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಗಗನ್ ಪಡೆದರೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಸಾಧಿಕ್ ಆಯ್ಕೆಯಾದರು. ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಕುಟ್ಟಪ್ಪ ಪಡೆದರೆ, ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಆಕಾಶ್ ಪಡೆದುಕೊಂಡರು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಸಾಧಿಕ್ ಪಡೆದುಕೊಂಡರೆ, ಬೆಸ್ಟ್ ಕ್ಯಾಪ್ಟನ್ ಪ್ರಶಸ್ತಿಗೆ ಸುನಿಲ್ ಆಯ್ಕೆಯಾದರು. ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಮಹಮ್ಮದ್ ಅಲಿ ಪಡೆದುಕೊಂಡರು. ಪಂದ್ಯಾವಳಿಯಲ್ಲಿ ಬೆಸ್ಟ್ ಟೀಮ್ ಪ್ರಶಸ್ತಿಗೆ ಎಚ್‌ಎಂಎಸ್ ತಂಡ ಆಯ್ಕೆಯಾದರೆ,ಬೆಸ್ಟ್ ಓನರ್ ಪ್ರಶಸ್ತಿಗೆ ಹರೀಶ್ ಭಾಜನರಾದರು.

ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಇರ್ಷಾದ್ ನೀಡಿದರು.ಪಂದ್ಯಾವಳಿಯ ತೀರ್ಪುಗಾರರಾಗಿ ರಾಶಿದ್ ಹಾಗೂ ಶಾನಿದ್ ಕಾರ್ಯನಿರ್ವಹಿಸಿದರು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಎ. ಮಹಮ್ಮದ್, ಬಿ.ಎಂ. ಪ್ರತೀಪ, ಪ್ರಮುಖರಾದ ನಿವೃತ್ತ ಸೈನಿಕ ಅಮ್ಮಂಡ ಅಶೋಕ್, ಸಂದ್ಯಾ ಹರೀಶ್, ಬಿ.ಕೆ. ಮಹಮ್ಮದ್ ಅಲಿ, ಎಂ.ಎಸ್. ಇಬ್ರಾಹಿಂ, ಎ. ಹೆಚ್. ಅಝೀಝ್, ಎಂ.ಎಸ್. ಮಹಮ್ಮದ್ ಅಲಿ, ಎ.ಎಸ್. ಶಫೀಕ್, ಟಿ.ಎ. ಇಬ್ರಾಹಿಂ, ಬಿ.ಎಂ. ಹಂಝ, ಜೀಲಾನಿ ರಫೀಕ್, ಆಯೋಜಕರಾದ ರಿಜ್ವಾನ್, ಆಸಿಫ್, ಮಹಮ್ಮದ್ ಅಲಿ ಸೇರಿದಂತೆ ಅಲ್ ಅಮೀನ್ ಕ್ರಿಕೆಟರ್ಸ್ನ ಪದಾಧಿಕಾರಿಗಳು, ಪಂದ್ಯಾವಳಿಯಲ್ಲಿ ಪಾಲ್ಗೊಂಡ ವಿವಿಧ ತಂಡಗಳ ಮಾಲೀಕರು, ನಾಯಕರು, ಸದಸ್ಯರು ಮತ್ತಿತರ ಪ್ರಮುಖರು, ಕ್ರೀಡಾಭಿಮಾನಿಗಳು ಹಾಜರಿದ್ದರು.