ಮಡಿಕೇರಿ, ಫೆ. ೩: ಖೇಲೋ ಇಂಡಿಯಾ ೨೦೨೪-೨೫ ಮಹಿಳಾ ಫುಟ್ಬಾಲ್ ಪಂದ್ಯಾವಳಿಗೆ ಭಾಗವಹಿಸಲು ಆಟಗಾರ್ತಿಯರ ಆಯ್ಕೆ ಪ್ರಕ್ರಿಯೆ ತಾ.೫ರಂದು ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಯುನೈಟೆಡ್ ಎಫ್.ಸಿ ತಂಡದ ಮುಖ್ಯಸ್ಥ ಎಚ್.ಎಚ್. ಹರೀಶ್ ತಿಳಿಸಿದ್ದಾರೆ.

೧-೧-೨೦೧೦ ಹಾಗೂ ೩೧-೧೨-೨೦೧೧ರೊಳಗೆ ಜನಿಸಿರುವ ಆಟಗಾರ್ತಿಯರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಭಾಗವಹಿಸುವ ಆಟಗಾರ್ತಿಯರು ತಮ್ಮ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರದ ಮೂಲ ಪ್ರತಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ೮೯೫೧೮೨೦೨೫೧ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.