ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಫೆ. ೩: ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗಬೇಕೆಂಬ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಲು ಕಾಲ ಕೂಡಿ ಬಂದಿದ್ದು, ಈ ಸಂಬAಧ ಆಡಳಿತಾತ್ಮಕ ಪ್ರಕ್ರಿಯೆಗಳು ಗರಿಗೆದರಿರುವುದರಿಂದ ಪ್ರತಿಮೆ ನಿರ್ಮಾಣವಾಗುವ ವಿಶ್ವಾಸ ಮೂಡಿದೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ರಾಷ್ಟçದ ಹಲವೆಡೆ ಸೇರಿದಂತೆ ಪ್ರಪಂಚದ ವಿವಿಧೆಡೆ ಕಂಡುಬರುತ್ತದೆ. ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಪುತ್ಥಳಿಗಳು ಕಾಣಸಿಗುತ್ತವೆ. ಆದರೆ, ಕೊಡಗಿನ ಸೋಮವಾರಪೇಟೆಯಲ್ಲಿ ಹೊರತುಪಡಿಸಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲಿಯೂ ಪುತ್ಥಳಿ ಇರಲಿಲ್ಲ. ಪುತ್ಥಳಿ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ದಲಿತ ಸಂಘಟನೆಗಳು ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಭೆ-ಸಮಾರಂಭಕ್ಕೆ ಬರುವ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡುತ್ತ ಬರುತ್ತಿದ್ದರೂ ಫಲಪ್ರದವಾಗಿರಲಿಲ್ಲ. ಇದೀಗ ಪುತ್ಥಳಿ ನಿರ್ಮಾಣದ ಕನಸು ನನಸಾಗುವ ಹಂತಕ್ಕೆ ತಲುಪಿರುವ ಲಕ್ಷಣಗಳು ಕಂಡುಬAದಿವೆ.

ಈ ಹಿಂದೆ ಮಡಿಕೇರಿಯ ಅಂಬೇಡ್ಕರ್ ಭವನ ಎದುರು ಪ್ರತಿಮೆ ನಿರ್ಮಾಣಕ್ಕೆ ಪ್ರಯತ್ನಗಳು ನಡೆದವು. ಆದರೆ, ಖಾಸಗಿ ಜಾಗದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ದೊರೆಯುವುದಿಲ್ಲ ಎಂಬ ಅಂಶದ ಹಿನ್ನೆಲೆ ೩೭ ಸಂಘಟನೆಗಳ ಪ್ರಮುಖರ ಸಭೆ ನಡೆಸಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕಾಗಿ ಸಮಿತಿಯನ್ನು ರಚಿಸಿ ಟಿ.ಈ. ಸುರೇಶ್ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅನಂತರ ಶಾಸಕರು, ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿತ್ತು.

ನಗರಸಭೆ ವ್ಯಾಪ್ತಿಯಲ್ಲಿ ಜಾಗ ಇರುವುದರಿಂದ ಜನಪ್ರತಿನಿಧಿಗಳ ಒಮ್ಮತ ಬೇಕಾಗಿತ್ತು. ನಗರಸಭೆ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆಯ ಠರಾವು ಮಂಡಿಸಿ ಸದಸ್ಯರು ಒಮ್ಮತ ಸೂಚಿಸಿ ನಿರ್ಣಯಿಸಿದ ಹಿನ್ನೆಲೆ ಇದೀಗ ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತು ನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿಯ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಸಮೀಪದ ಉದ್ಯಾನವನದಲ್ಲಿ ಜಾಗ ಗುರುತು ಮಾಡಲಾಗಿದೆ.

ಸಲಹೆ-ಆಕ್ಷೇಪಣೆಗೆ ಅವಕಾಶ

ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ (ಸುದರ್ಶನ ಸರ್ಕಲ್) ಇರುವ ನಗರಸಭಾ ಉದ್ಯಾನವನದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ ಮಡಿಕೇರಿ ನಗರಸಭೆಗೆ ನೀಡಿರುವ ಮನವಿ ಆಧರಿಸಿ ಸಲಹೆ-ಆಕ್ಷೇಪಣೆ ಸಲ್ಲಿಸಲು ನಗರಸಭೆ ಪ್ರಕಟಣೆ ಹೊರಡಿಸಿದೆ.

ಸರ್ವೆ ನಂ. ೫೪೧ ರಲ್ಲಿ ಉದ್ಯಾವನದ ಒಂದು ಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ತೀರ್ಮಾನವಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳಿದ್ದಲ್ಲಿ ಮುಂದಿನ ೩೦ ದಿನದೊಳಗೆ (ಫೆ. ೧ ರಿಂದ ಅನ್ವಯಿಸುವಂತೆ) ಪೂರಕ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ನಗರಸಭೆಗೆ ನೀಡಬಹುದಾಗಿದ್ದು, ಅವಧಿ ಮೀರಿ ಬರುವ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.