ಶನಿವಾರಸಂತೆ, ಫೆ. ೩: ಪಟ್ಟಣದ ಮುಖ್ಯ ಬೀದಿಗಳಲ್ಲಿ ಗುರುವಾರ ರಾತ್ರಿ ೭-೩೦ ಕ್ಕೆ ಶ್ರೀಜಯದೇವ ಜಾನುವಾರುಗಳ ಜಾತ್ರೆಗೆ ಬಂದಿರುವ ಹಳ್ಳಿಕಾರು ಎತ್ತುಗಳ ಮೆರವಣಿಗೆ ಸಂಭ್ರಮದಿAದ ನಡೆಯಿತು.
ಕಾವೇರಿ ರಸ್ತೆಯಲ್ಲಿರುವ ಕಾವೇರಿ ವಿದ್ಯಾಸಂಸ್ಥೆಯ ಆವರಣದಲ್ಲಿ ೪ ಜತೆ ಹಳ್ಳಿಕಾರ್ ಎತ್ತುಗಳಿಗೆ ಪ್ರಾಂಶುಪಾಲ ಎಚ್.ಎನ್.ದೇವರಾಜ್ ಹೂವಿನ ಮಾಲಾರ್ಪಣೆ ಮಾಡಿ , ನೆನಪಿನ ಕಾಣಿಕೆ ನೀಡಿ ಮೆರವಣಿಗೆಗೆ ಚಾಲನೆ ನೀಡಿದರು.
ಜಾತ್ರೆಗೆ ಬಂದಿರುವ ಅತ್ಯುತ್ತಮ ಹಳ್ಳಿಕಾರ್ ಎತ್ತುಗಳನ್ನು ಮೊದಲ ಬಾರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ಕಾರ್ಯಕ್ರಮಕ್ಕೆ ಕಾವೇರಿ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಿರುವುದು ಹೆಮ್ಮೆಯೆನಿಸುತ್ತದೆ ಎಂದರು.
ಶನಿವಾರಸAತೆ ಪೊಲೀಸ್ ಠಾಣಾಧಿಕಾರಿ ಎಚ್.ವೈ.ಚಂದ್ರ ಮಾತನಾಡಿ, ಜಾನುವಾರು ಜಾತ್ರೆ ಸುಸೂತ್ರವಾಗಿ ಜರುಗಿ ಯಶಸ್ವಿಯಾಗಲು ಸರ್ವರೂ ಸಹಕರಿಸಬೇಕು ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ವೀರೇಂದ್ರ ಕುಮಾರ್, ಹಿಂದೂ ಜಾಗರಣಾ ವೇದಿಕೆ ಮುಖಂಡರು, ಕಾರ್ಯಕರ್ತರು, ರೈತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.