ಗೋಣಿಕೊಪ್ಪಲು, ಫೆ. ೩: ಪೆಟ್ರೋಲ್ ಬಂಕ್‌ನಲ್ಲಿ ಸಿಗರೇಟು ಸೇವನೆ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕಾಗಿ ಪೆಟ್ರೋಲ್ ಬಂಕ್ ಕಾರ್ಮಿಕನ ಮೇಲೆ ಹಲ್ಲೆ ನಡೆದ ಘಟನೆ ಕುಟ್ಟದಲ್ಲಿ ಸಂಭವಿಸಿದೆ.

ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಕುಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಪಿ. ಪೆಟ್ರೋಲ್ ಬಂಕ್ ಅನುಗ್ರಹ ಸರ್ವಿಸ್ ಸ್ಟೇಷನ್‌ಗೆ ಇಂಧನ ಹಾಕಿಸಿಕೊಳ್ಳಲು ಬಂದ ಕಪ್ಪು ಬಣ್ಣದ ಥಾರ್ (ಕೆ.ಎಲ್. ೦೪ ೩೩೫೫) ವಾಹನದಲ್ಲಿ ಐದು ಪ್ರಯಾಣಿಕರಿದ್ದು, ಓರ್ವ ವ್ಯಕ್ತಿ ಸಿಗರೇಟು ಸೇವನೆ ಮಾಡುತ್ತಿದ್ದರು. ಅದನ್ನು ಇಂಧನ ತುಂಬಿಸುವ ಕಾರ್ಮಿಕ ಗಿರೀಶ್ ಆಕ್ಷೇಪಿಸಿದಾಗ ಆತ ಕಾರಿನಿಂದ ಇಳಿದು ಗಿರೀಶ್ ಮೇಲೆ ಹಲ್ಲೆ ನಡೆಸಿ ಕೆಟ್ಟ ಮಾತುಗಳಿಂದ ಬೈದು ಪರಾರಿಯಾಗಿರುತ್ತಾರೆ.

ಈ ಬಗ್ಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಕೇರಳದಿಂದ ಕೊಡಗು ಪ್ರವಾಸಕ್ಕಾಗಿ ಬಂದಿರುವ ಗುಂಪು ಇದಾಗಿರಬಹುದು ಎಂಬ ಸಂಶಯವಿದ್ದು, ಆ ವಾಹನವು ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಅನುಮಾನವಿದೆ. ಈ ಸಂಖ್ಯೆಯ ವಾಹನ ಕಂಡುಬAದಲ್ಲಿ ಕೂಡಲೇ ಸನಿಹದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕುಟ್ಟ ಪೊಲೀಸರು ಕೋರಿದ್ದಾರೆ.