ಮಡಿಕೇರಿ, ಫೆ. ೪: ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಮೂಲೆಗುಂಪಾಗಿದ್ದು, ಇದುವರೆಗೂ ಈ ಸಂಬAಧ ಯಾವುದೇ ಕ್ರಮಗಳನ್ನು ಕೇಂದ್ರ ಕೈಗೊಂಡಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೯ರಲ್ಲಿ ಯೋಜನೆ ಘೋಷಣೆಯಾದರು ಪ್ರಕ್ರಿಯೆಗಳು ಮುಂದುವರೆದಿಲ್ಲ. ಸರ್ವೆ ಆಗಿದೆ ಎಂಬ ವಾದಕ್ಕೆ ಪುಷ್ಠಿ ನೀಡುವ ಯಾವುದೇ ಪುರಾವೆಗಳಿಲ್ಲ. ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಅಂಶಗಳಿಲ್ಲ. ಮಡಿಕೇರಿಯಲ್ಲಿ ಏರ್‌ಪೋರ್ಟ್ ನಿರ್ಮಾಣದ ಪ್ರಸ್ತಾಪ, ಕಸ್ತೂರಿ ರಂಗನ್ ವರದಿ ತಿರಸ್ಕಾರ ಭರವಸೆ ಏನಾಯಿತು.? ಎಂದು ಪ್ರಶ್ನಿಸಿದ ಅವರು, ಕಾಫಿ ಬೆಳೆಗಾರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಯಾವುದೇ ಕ್ರಮಕೈಗೊಂಡಿಲ್ಲ. ಸಣ್ಣ, ಮಧ್ಯಮ ಉದ್ಯಮಕ್ಕೆ ಪೂರಕ ಕೊಡುಗೆಗಳಿಲ್ಲ ಎಂದು ದೂರಿದರು.

ಅಭಿವೃದ್ಧಿ ಸಹಿಸಲಾಗದೆ ಬಿಜೆಪಿ ಕೇವಲ ಕುತಂತ್ರದ ರಾಜಕಾರಣ ಮಾಡುತ್ತಿದೆ. ಜಿಲ್ಲೆಯ ಶಾಸಕರು ದಿನದ ೨೪ ಗಂಟೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರವೂ ಜಿಲ್ಲೆಯ ಜೊತೆಗಿದೆ. ಬಿಜೆಪಿ ಕೇವಲ ಜನರ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದೆ ಎಂದರು.

ಚೊಂಬು, ಚಿಪ್ಪು ಪ್ರದರ್ಶಿಸಿ ಲೇವಡಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಬಜೆಟ್ ನಿಷ್ಪçಯೋಜಕವಾಗಿದೆ ಎಂದು ಆರೋಪಿಸಿ ಮೂರು ನಾಮ ಬಳಿದ ಖಾಲಿ ಚೊಂಬು, ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿ ‘ಗೋವಿಂದ, ಗೋವಿಂದ’ ಘೋಷಣೆ ಕೂಗಿ

ಕಾಂಗ್ರೆಸ್ ಲೇವಡಿ ಮಾಡಿತು.

ಈ ಬಾರಿಯ ಬಜೆಟ್ ಗಾತ್ರ ರೂ. ೫೦ ಲಕ್ಷ ಕೋಟಿ ದಾಟಿದೆ. ಕಳೆದ ಬಜೆಟ್ ರೂ. ೪೮ ಲಕ್ಷ ಕೋಟಿ ಮಂಡನೆಯಾಗಿತ್ತು. ಆದರೆ, ನಿರೀಕ್ಷಿತ ಆದಾಯ ಬರುವುದಿಲ್ಲ ಎಂದು ತಿಳಿದು ರೂ. ೧ ಲಕ್ಷ ಕೋಟಿ ಕಡಿತಗೊಳಿಸಿತ್ತು. ಈ ಬಾರಿಯ ಬಜೆಟ್ ಪ್ರಕಾರ ರೂ. ೧೬ ಲಕ್ಷ ಕೋಟಿ ಹಣ ಸಾಲ ಮಾಡಬೇಕಾಗಿದೆ. ೧೨ ಲಕ್ಷ ಕೋಟಿ ಮಾಡಿದ್ದ ಸಾಲಕ್ಕೆ ಬಡ್ಡಿ ಪಾವತಿಸಬೇಕಾಗಿದೆ. ೧೯೪೭ ರಿಂದ ೨೦೧೪ರ ತನಕ ದೇಶದ ಸಾಲ ರೂ. ೫೩ ಲಕ್ಷ ಕೋಟಿ ಇತ್ತು. ಅನಂತರದ ೧೦ ವರ್ಷದ ಅವಧಿಯಲ್ಲಿ ನರೇಂದ್ರ ಮೋದಿ ಸರಕಾರ ರೂ. ೨೦೫ ಲಕ್ಷ ಕೋಟಿ ಸಾಲ ಮಾಡಿ ದೇಶವನ್ನು ಸಾಲದ ಕೂಪಕ್ಕೆ ತಳ್ಳಿ ಪ್ರತಿಯೊಬ್ಬರ ತಲೆ ಮೇಲೆ ಸಾಲದ ಹೊರೆಯನ್ನು ಹೊರಿಸಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಸಂಸದರು, ಸಚಿವರು ಈ ಬಜೆಟ್ ಎಷ್ಟು ಪ್ರಯೋಜಕ ಎಂದು ಉತ್ತರಿಸಬೇಕಾಗಿದೆ. ಕಳೆದ ಬಾರಿಯ ಯೋಜನೆಯನ್ನೇ ಮರುಮಂಡನೆ ಮಾಡಲಾಗಿದೆ. ಕರ್ನಾಟಕ ದೇಶಕ್ಕೆ ಅತೀ ಹೆಚ್ಚು ತೆರಿಗೆ ನೀಡುವುದರಲ್ಲಿ ೨ನೇ ಸ್ಥಾನದಲ್ಲಿದೆ. ಆದರೆ, ರಾಜ್ಯಕ್ಕೆ ಯಾವುದೇ ಯೋಜನೆಯನ್ನು ನೀಡದೆ ನಿರ್ಲಕ್ಷö್ಯ ತೋರಲಾಗಿದೆ. ಚುನಾವಣೆ ಹಿನ್ನೆಲೆ ದೆಹಲಿ, ಬಿಹಾರಕ್ಕೆ ರೂಪಿಸಿದ ಬಜೆಟ್ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಜಿಲ್ಲಾ ವಕ್ತಾರ ತೆನ್ನಿರ ಮೈನಾ, ಕಕ್ಕಬೆ ಗ್ರಾ.ಪಂ. ಸದಸ್ಯ ಕಲಿಯಂಡ ಸಂಪತ್ ಹಾಜರಿದ್ದರು.