ಕುಶಾಲನಗರ, ಫೆ. ೧೦: ಕಾಳು ಮೆಣಸು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದವರಿಂದ ಲಂಚ ಸ್ವೀಕರಿಸುವ ವೇಳೆ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿದೆ.
ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಕೆ.ಸಿ. ಸಂದೇಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. ಮೂಲತಃ ಶಿವಮೊಗ್ಗದ ನಿವಾಸಿ ಕಾಳುಮೆಣಸು ವ್ಯಾಪಾರದ ಮಧ್ಯವರ್ತಿ ಬಿಎಸ್ ಸಾತ್ವಿಕ್ ಎಂಬವರಿAದ ಕಾಳು ಮೆಣಸು ಸಾಗಾಟಕ್ಕೆ ಸಂಬAಧಿಸಿದAತೆ ಸಂದೇಶ್ ಅರವತ್ತು ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ತಮ್ಮ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಂಗಳಿಗೆ ೬೦ ಸಾವಿರದಂತೆ ಹಣ ನೀಡಲು ಬೇಡಿಕೆ ಇಟ್ಟಿರುವುದಾಗಿ ವ್ಯಾಪಾರಿ ಸಾತ್ವಿಕ್ ಮಾಹಿತಿ ನೀಡಿದ್ದಾರೆ. ಅದರಂತೆ ತಾನು ಲಂಚ ನೀಡುವ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಪ್ರಕಾಶ್ ಮತ್ತು ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿಗಳು ಸೋಮವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿದ್ದು, ಅಧಿಕಾರಿಯಿಂದ ರೂ. ೬೦ ಸಾವಿರ ನಗದು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿ ಸಂದೇಶ್ ಜಿಲ್ಲೆಯಿಂದ ನೆರೆಯ ಜಿಲ್ಲೆಗಳಿಗೆ ಸಾಗಿಸುತ್ತಿದ್ದ ಕಾಳುಮೆಣಸು ಲಾರಿಗಳನ್ನು ತಡೆದು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಹಿನ್ನೆಲೆಯಲ್ಲಿ ಸಾತ್ವಿಕ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
(ಮೊದಲ ಪುಟದಿಂದ) ಸೋಮವಾರ ಮಧ್ಯಾಹ್ನ ಕಾರ್ಯದರ್ಶಿ ಸಂದೇಶ್ ತನ್ನ ಕಚೇರಿಯಿಂದ ಮಾರುಕಟ್ಟೆ ಆವರಣದಲ್ಲಿರುವ ತನ್ನ ನಿವಾಸಕ್ಕೆ ತೆರಳಿ ಅಲ್ಲಿ ಲಂಚ ಸ್ವೀಕರಿಸಿ ನಂತರ ಹೊರಬರುವ ಸಂದರ್ಭ ಅಧಿಕಾರಿಗಳು ಸಂದೇಶ್ ಅವರನ್ನು ವಶಕ್ಕೆ ಪಡೆದು ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿ ಸಂದೇಶ್ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಕಳೆದ ಐದು ತಿಂಗಳಿನಿAದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.