ನಾಪೋಕ್ಲು, ಫೆ. ೧೦: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಗುರಿಯ ಕಡೆಗೆ ಗಮನವನ್ನು ನೀಡಬೇಕೆಂದು ಕೀಪಾಡಂಡ ಮೊಣ್ಣಪ್ಪ ಹೇಳಿದರು. ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನಲ್ಲಿ ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೀಪಾಡಂಡ ಬಸಪ್ಪ ಸ್ಮರಣಾರ್ಥ ೧ ಲಕ್ಷ ದತ್ತಿನಿಧಿ ಸ್ಥಾಪಿಸಿದ ಕೀಪಾಡಂಡ ಮೊಣ್ಣಪ್ಪನವರು ೧೦ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ಮುಫೀದಾಳಿಗೆ ೭,೦೦೦ ರೂ ಮೊತ್ತವನ್ನು ವಿತರಿಸಿ ಶುಭ ಹಾರೈಸಿದರು. ದತ್ತಿನಿಧಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಿ.ಎಸ್. ರಾಮಕೃಷ್ಣ ಅವರು ವಿದ್ಯಾರ್ಥಿಗಳ ಕಲಿಕೆಗೆ ಇದೊಂದು ಪ್ರೇರಣದಾಯಕವಾದ ಅಂಶವಾಗಿದ್ದು ವಿದ್ಯಾರ್ಥಿಗಳು ಈ ಹಣವನ್ನು ತಮ್ಮ ಮುಂದಿನ ಕಲಿಕೆಗೆ ಬಳಸಿಕೊಳ್ಳುವುದರ ಮೂಲಕ ಉನ್ನತ ವ್ಯಾಸಂಗವನ್ನು ಮಾಡುವಂತಾಗಲಿ ಎಂದರು. ಸಿ.ಆರ್. ಲೋಕೇಶ್ ಸ್ವಾಗತಿಸಿ ಸಹ ಶಿಕ್ಷಕರಾದ ಪರಮೇಶ ಎಸ್.ಪಿ. ವಂದಿಸಿದರು.