ಕಡAಗ, ಫೆ. ೧೦ : ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ (ಕೆಪಿಎಲ್) ಬಿಡ್ಡಿಂಗ್ ಪ್ರಕ್ರಿಯೆ ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಅವರು ಮಾತನಾಡಿ, ಕೆಪಿಎಲ್ ಕ್ರಿಕೆಟ್ ೧೦ನೇ ವರ್ಷಕ್ಕೆ ಪದಾರ್ಪಣೆ ಯಾಗಿದೆ ಎಂಬುವುದು ಸಂತೋಷ. ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಎಲ್ಲಾ ಪಂದ್ಯಾಟಗಳು ಒಂದೇ ಆಯೋಜಕತ್ವದಲ್ಲಿ ನಡೆದರೆ ಉತ್ತಮವಾಗುತಿತ್ತು ಎಂದರು. ಮತ್ತೋರ್ವ ಮುಖ್ಯ ಅತಿಥಿ ಪತ್ರಕರ್ತ ಅಶ್ರಫ್ ಮಾತನಾಡಿ, ಕೆಪಿಎಲ್ ಆಯೋಜಕರು ಉತ್ತಮ ಕ್ರೀಡಾಕೂಟ ಆಯೋಜಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯುತ್ತಿರುವುದು ಶ್ಲಾಘನೀಯ. ಇಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ರಾಜ್ಯ, ಅಂತರರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮಕ್ಕೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಡಂಗ ವ್ಯಾಪ್ತಿಯ ಒಟ್ಟು ೭ ತಂಡಗಳಾದ ಕೂರ್ಗ್ ವಾರಿಯರ್ಸ್, ಎಬಿಆರ್ ಕ್ರಿಕೆಟರ್ಸ್, ಕೊಡಗು ರಾಯಲ್ಸ್, ಇಲೆವೆನ್ ಮೋಸ್ಟರ್, ಸ್ಟೆçöÊಕ್ ಫೋರ್ಸ್ ಇಲೆವೆನ್, ತಪ್ಸಿ ಕ್ರಿಕೆಟರ್ಸ್, ಸ್ಟಿçÃಟ್ ಫೈಟರ್ಸ್ ತಂಡಗಳ ಮಾಲೀಕರು ಹಾಗೂ ವ್ಯವಸ್ಥಾಪಕರು, ಕೋಚ್ ಭಾಗವಹಿಸಿದರು. ಇದರಲ್ಲಿ ಸ್ಟಿçÃಟ್ ಫೈಟರ್ಸ್ ತಂಡದ ಮಾಲೀಕ ಐಕಾನ್ ಆಟಗಾರ ಸಜೀರ್ ಅವರನ್ನು ೨೯ ಸಾವಿರ ರೂ.ಗಳ ಬೃಹತ್ ಮೊತ್ತಕ್ಕೆ ಖರೀದಿಸಿದ್ದು ವಿಶೇಷ ವಾಗಿತ್ತು. ಏಪ್ರಿಲ್ ೧೦ ರಿಂದ ೧೩ ರವರೆಗೆ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ ಎಂದು ಆಯೋಜಕರಾದ ಜುನೈದ್ ಕೆ.ಎಂ. ಹಾಗೂ ಇಕ್ಬಾಲ್ ಮಾಹಿತಿ ನೀಡಿದರು.
ಈ ಸಂದರ್ಭ ಮೊಹಿಯ್ಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್, ನಡಿಕೇರಿಯಂಡ ಜೀವನ್, ಬರೋಡ ಬ್ಯಾಂಕ್‌ನ ಅಶ್ರಫ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ವೈಶಾಕ್, ಕರೀಂ, ರಜಾಕ್, ರಾಝಿಕ್, ಸಲಾಂ, ಸಮೀರ್, ಸಿದ್ದಿಕ್, ಕಬೀರ್, ಆಶಿಕ್, ರಹೀಂ, ಷರೀಫ್, ಅಝರುದ್ದಿನ್, ಆಸ್ಕರ್, ಅಜೀಝ್, ರಝಿಕ್ ಎಬಿಆರ್, ನೌಫಲ್ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ನೌಫಲ್ ಎಂ.ಬಿ. ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.