ಪೊನ್ನಂಪೇಟೆ, ಫೆ. ೧೦: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಹಿರಿಯ ಸಮಾಜ ಸೇವಕರು ಹಾಗೂ ಕರ್ನಾಟಕ ಸರ್ಕಾರದ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತರಾದ ಕೈಬುಲಿರ ಪಾರ್ವತಿ ಬೋಪಯ್ಯ ಅವರನ್ನು ಮುಗುಟಗೇರಿ ಗ್ರಾಮದ ಶ್ರೀ ಭೂತನಾಥ ಅಯ್ಯಪ್ಪ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ಪೊನ್ನಂಪೇಟೆಯ ಇಗ್ಗುತಪ್ಪ ಸೌಹಾರ್ದ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶ್ರೀ ಭೂತನಾಥ ಅಯ್ಯಪ್ಪ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಚೀರಂಡ ಸಂಧ್ಯಾ, ಕಾರ್ಯದರ್ಶಿ ಚೀರಂಡ ಜಾನಕಿ, ಸದಸ್ಯರಾದ ಗಾಂಡAಗಡ ರೀನಾ, ಕಳ್ಳಿಚಂಡ ಸುನಿತಾ, ಮಲಚಿರ ಸುಮಾ, ಚೀರಂಡ ಲೀಲಾವತಿ, ಕಳ್ಳಿಚಂಡ ರೇಖಾ, ಚೀರಂಡ ಸುಜಾತಾ, ಮಲಚಿರ ಸೌಮ್ಯ, ಕೋಟೆರ ಲಲಿತಾ, ಮುದ್ದಿಯಡ ಲಲಿತಾ, ಚೀರಂಡ ಕಾವೇರಮ್ಮ, ಗಾಂಡAಗಡ ವಿಮಲ, ಕಿರುಂದAಡ ದಮಯಂತಿ, ಮುದ್ದಿಯಡ ಸ್ವಾತಿ, ಕಳ್ಳಿಚಂಡ ದೀನಾ, ಮುದ್ದಿಯಡ ಸೀತಮ್ಮ, ಕಿರುಂದAಡ ಸುನಿತಾ, ಚೀರಂಡ ಭವಾನಿ, ಕಳ್ಳಿಚಂಡ ಅನಿತಾ ಉಪಸ್ಥಿತರಿದ್ದರು.