(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಫೆ. ೧೦ : ಈ ಹಿಂದಿನಿAದಲೂ ಮಕ್ಕಳಿರಲವ್ವ... ಮನೆತುಂಬ ಎಂಬ ಮಾತೊಂದು ರೂಢಿಯಲ್ಲಿದೆ. ಆದರೆ, ಇದೀಗ ಕೊಡಗು ಜಿಲ್ಲೆಯಲ್ಲಿ ಹಲವೆಡೆಗಳಲ್ಲಿ ಮಂಗಗಳಿವೆ ನೋಡಿ ಊರ ತುಂಬೆಲ್ಲಾ ಎಂಬAತೆ ಹೊಸ ಮಾತು ಶುರುವಾಗುತ್ತಿದೆ. ಗುಡ್ಡಗಾಡು ಪ್ರದೇಶವಾಗಿದ್ದು, ಪ್ರಾಕೃತಿಕ ಐಸಿರಿಯೊಂದಿಗೆ, ಕಾಫಿ ತೋಟಗಳು, ಅಡಿಕೆ, ತೆಂಗು, ವಿವಿಧ ಹಣ್ಣು - ಹಂಪಲುಗಳು, ಗಿಡಬಳ್ಳಿಗಳು, ಕಾಡು ಹಣ್ಣುಗಳು, ಕಿತ್ತಳೆಯ ಸ್ವಾದದಿಂದ ತುಂಬಿರುವ ಕೊಡಗು ಜಿಲ್ಲೆ ಇದೀಗ ಹೊಸತೊಂದು ಸಮಸ್ಯೆಯನ್ನು ಎದುರಿಸುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ನಿಧಾನಗತಿಯಲ್ಲಿ ಶುರುವಿಟ್ಟುಕೊಂಡ ಈ ಸಮಸ್ಯೆ ಕೃಷಿ ಪ್ರಧಾನವಾದ, ವಿವಿಧ ರೀತಿಯ ಫಸಲುಗಳನ್ನೇ ಜೀವನಾಧಾರವಾಗಿ ಕಂಡುಕೊAಡಿರುವ ರೈತರು - ಬೆಳೆಗಾರರಲ್ಲಿ ಆತಂಕದೊAದಿಗೆ ಪಡಿಪಾಟಲನ್ನೂ ಸೃಷ್ಟಿಸುವಂತೆ ಮಾಡಿದೆ.

ಮುಂದಿನ ದಿನಗಳಲ್ಲಿ ಇದು ಭಾರೀ ಗಂಭೀರ ಸ್ವರೂಪ ಪಡೆಯುವುದರಲ್ಲಿ ಎರಡು ಮಾತಿಲ್ಲ ಎಂಬುದು ಹತ್ತು ಹಲವು ಕೃಷಿಕರ ಅನುಭವದ ಮಾತಾಗಿದೆ. ಮೊದಲೇ ಜಿಲ್ಲೆಯಲ್ಲಿ ಕಾಡಾನೆಗಳು, ಕಾಡೆಮ್ಮೆಗಳು, ಹುಲಿರಾಯನ ಹೆಜ್ಜೆ, ಚಿರತೆ, ಕಾಡುಹಂದಿಗಳು, ಮುಳ್ಳುಹಂದಿಗಳು, ಈ ರೀತಿಯಾಗಿ ವಿವಿಧ ರೀತಿಯ ವನ್ಯಪ್ರಾಣಿಗಳ ಉಪಟಳ ಪ್ರಸ್ತುತದ ಸನ್ನಿವೇಶದಲ್ಲಿ ಸರ್ವೇ ಸಾಮಾನ್ಯ ಎಂಬAತಾಗಿದೆ...

ಇದೀಗ ಇವೆಲ್ಲದರ ಸಾಲಿಗೆ ಹೊಸ ಸೇರ್ಪಡೆಯಾಗುತ್ತಿರುವುದು ಮಂಗಗಳು ಸಾರ್... ಮಂಗಗಳು...! ಹೊರಜಿಲ್ಲೆ... ಬಯಲು ಪ್ರದೇಶಗಳಿಗೆ ಹೋಲಿಸಿದರೆ, ಈ ಮೂಕ ಜೀವಿಗಳಿಗೆ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಕೊಡಗು ಎಂಬ ಪ್ರದೇಶ ಹೇಳಿ ಮಾಡಿಸಿದಂತಿದೆ. ವಿವಿಧ ರೀತಿಯ ಹಣ್ಣು - ಹಂಪಲು, ಗೆಡ್ಡೆ - ಗೆಣಸುಗಳು, ಸೊಪ್ಪು - ಇತ್ಯಾದಿಗಳು ಇಲ್ಲಿ ಯಥೇಚ್ಚವಾಗಿ ಸಿಗುತ್ತವೆ. ಇತರೆಡೆಗಳಲ್ಲಿ ಆಹಾರಕ್ಕಾಗಿ ಪರದಾಡುವ ಈ ಜೀವಿಗಳಿಗೆ ಇದೀಗ ಕೊಡಗು ಸ್ವರ್ಗ ಎಂಬAತಾಗಿದೆ.. ಜಿಲ್ಲೆಯ ಕೆಲವಾರು ಗ್ರಾಮ- ಊರುಗಳಲ್ಲಿ ಇದೀಗ ಮಂಗಗಳದ್ದೇ ಮಂಗಾಟವಾಗಿದೆ. ನಗರ, ಪಟ್ಟಣ ಪ್ರದೇಶಗಳಲ್ಲೂ ಮಂಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅರಣ್ಯ ಪ್ರದೇಶದ ಗಡಿಗಳಲ್ಲಿ ಇವುಗಳ ಉಪಟಳ - ಕೀಟಲೆ ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಹಲವು ಬೆಳೆಗಾರರು - ರೈತರು ಹೇಳುತ್ತಿದ್ದಾರೆ. ಹಲಸು, ಬಾಳೆ, ಅಡಿಕೆ, ತೆಂಗು, ಕಿತ್ತಳೆ, ಸಪೋಟ, ಬಟರ್‌ಫ್ರೂಟ್ ಸೇರಿದಂತೆ ವಿವಿಧ ರೀತಿಯ ಫಸಲುಗಳು ಮಂಗಗಳಿಗೆ ಆಹಾರವಾಗುತ್ತಿವೆ.

ಮತ್ತೊಂದು ಆಘಾತ

ಕೆಲವು ಕೀಟಲೆಗಳನ್ನು ಜನರು ಹೆಚ್ಚಾಗಿ ಪರಿಗಣಿಸುತ್ತಿರಲಿಲ್ಲ. ಬದಲಿಗೆ ಇದೂ ಒಂದು ಜೀವಿಯಲ್ಲವೇ ಎಂಬAತಿದ್ದರು. ಇವೆಲ್ಲದರ ನಡುವೆ ಇದೀಗ ಜಿಲ್ಲೆಯ ಜನರ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಫಸಲನ್ನು ಮಂಗಗಳು ತಿನ್ನಲು ಶುರುವಿಟ್ಟುಕೊಂಡಿವೆ. ಕಾಫಿ ತೋಟದ ತುಂಬೆಲ್ಲ ಗುಂಪು ಗುಂಪಾಗಿ ಸೇರಿಕೊಂಡಿರುವ ಈ ಜೀವಿಗಳು ಗಿಡಗಳಲ್ಲಿ ಕೂತು ರೆಕ್ಕೆ ಮುರಿಯುವುದು, ಫಸಲನ್ನು ಉದುರಿಸುವುದು, ಜೊತೆಗೆ ತಮಗೆ ಬೇಕಾದಷ್ಟು ತಿಂದು ಹಾಕುವುದು ಈ ರೀತಿಯಾಗಿ ಉಪಟಳ ನೀಡುತ್ತಿವೆ. ಕಾಡಾನೆಗಳನ್ನು ಓಡಿಸಲು ಪಟಾಕಿಗಳನ್ನು ಸಿಡಿಸುತ್ತಿದ್ದ ಬೆಳೆಗಾರರು ಇದೀಗ ಮಂಗಗಳನ್ನು ಓಡಿಸಲು ಹರಸಾಹಸಪಡುತ್ತಿದ್ದಾರೆ.

ವಿವಿಧ ರೀತಿಯಲ್ಲಿ ಕೀಟಲೆ

ಹಣ್ಣು - ಹಂಪಲು, ಫಸಲು ನಾಶ ಮಾತ್ರವಲ್ಲ ಬಗೆ ಬಗೆಯ ಸಮಸ್ಯೆಗಳೂ ಅಲ್ಲಲ್ಲಿ ಎದುರಾಗುತ್ತಿವೆ. ಮನೆಯ ತಾರಸಿಗಳಲ್ಲಿ ಆಟವಾಡುವ ಸಂದರ್ಭ ಹೆಂಚುಗಳನ್ನು ಎಳೆದು ಹಾಕುವುದು, ವಿವಿಧ ಕಚೇರಿಗಳಿಗೂ ನುಗ್ಗಿ ಕುಚೇಷ್ಟೆ ಮಾಡುವುದು, ಶಾಲಾ - ಕಾಲೇಜುಗಳÀ ಆವರಣಕ್ಕೆ ಲಗ್ಗೆ ಹಾಕುವುದು... ಇಂತಹ ಕೀಟಲೆಗಳೂ ಸಾಮಾನ್ಯವಾಗುತ್ತಿವೆ.