ವೀರಾಜಪೇಟೆ, ಫೆ. ೧೦: ಸರ್ಕಾರಿ ಕೆರೆಗಳು ಸುತ್ತಮುತ್ತಲಿನ ೩೦ ಮೀಟರ್‌ಗಳಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳು, ಇನ್ನಿತರ ಚಟುವಟಿಕೆಗಳಿಗೆ ಅವಕಾಶ ಇಲ್ಲ್ಲದಿರುವಾಗ ಪುರಸಭೆಯ ವ್ಯಾಪ್ತಿಯಲ್ಲ್ಲಿರುವ ಕೆರೆಗಳ ಅಭಿವೃದ್ಧಿ ಗೊಳಿಸಲು ಸರ್ಕಾರವು ಇದೀಗ ಹಣ ಬಿಡುಗಡೆಗೊಳಿಸಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ನಾಗರಿಕ ಸಮಿತಿ ಆರೋಪಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿ ವೀರಾಜಪೇಟೆ ಸಂಚಾಲಕರಾದ ಡಾ. ಇ.ಆರ್. ದುರ್ಗಾಪ್ರಸಾದ್ ಅವರು ಸರ್ಕಾರವು ಸಾರ್ವಜನಿಕರ ತೆರಿಗೆ ಹಣದಿಂದ ಜನೋಪಯೋಗಿ ಕಾರ್ಯಕ್ರಮ ಗಳನ್ನು ರೂಪಿಸುತ್ತದೆ, ಅದರೇ ಸ್ಥಳೀಯವಾಗಿ ನಾಗರಿಕರಿಗೆ ಅನುಕೂಲವಾದ ರಸ್ತೆ, ಕುಡಿಯುವ ನೀರು ವಿದ್ಯುತ್, ಮತ್ತು ಇನ್ನಿತರ ಮೂಲಭೂತ ಸಮಸ್ಯೆ ಗಳಿದ್ದರು ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲಾಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ವೀರಾಜಪೇಟೆ ನಗರದಲ್ಲಿ ಎರಡು ಸರ್ಕಾರಿ ಕರೆಗಳಿವೆ. ಗೌರಿಕೆರೆ ಮತ್ತು ಛತ್ರಕೆರೆ. ಸುಂದರಗೊಳಿಸಲು ಮತ್ತು ಜೈನರ ಬೀದಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ. ಒಟ್ಟು ರೂ. ೫ ಕೋಟಿ ೭೯ ಲಕ್ಷಗಳ ಕ್ರೀಯಾ ಯೋಜನೆ ತಯಾರಿಸಿ ಇದೀಗ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆರೆಗಳ ಅಭಿವೃದ್ದಿ ಹೆಸರಿನಲ್ಲಿ ಕೆರೆಗಳ ಸುತ್ತಲು ಪಾದಚಾರಿಗಳಿಗೆ ಸಂಚರಿಸಲು ನಡೆಯುವ ಪಥ, ಮಳಿಗೆಗಳು, ರಂಗಮAದಿರ ಮತ್ತು ಶೌಚಾಲಯ ನಿರ್ಮಾಣಗಳು ಕ್ರಿಯಾ ಯೋಜನೆಯಲ್ಲಿದೆ. ಕೆರೆಗಳಿಗೆ ಸಂಭAದಿಸಿದAತೆ ರಾಷ್ಟಿçÃಯ ಹಸಿರು ನ್ಯಾಯಮಂಡಳಿ ಅದೇಶದಂತೆ ಕೆರೆಗಳ ಅಭಿವೃದ್ದಿ ಯೋಜನೆಯು ಕಾನೂನು ಬಾಹಿರವಾಗಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದಿ ಪ್ರಾಧಿಕಾರ ಅಧಿನಿಯಮ ೨೦೧೪ ರ ಅನ್ವಯ ಕೆರೆಗಳ ಸುತ್ತಮುತ್ತಲಿನಲ್ಲಿ ಯಾವುದೇ ಕಾಮಗಾರಿಗಳು ನಡೆಸುವಂತಿಲ್ಲ ಎಂದು ಉಲ್ಲೇಖವಿದ್ದರೂ ಆದೇಶಗಳನ್ನು ಗಾಳಿಗೆ ತೂರಿ ಕಾಮಗಾರಿಗಳಿಗೆ ಹಣ ವಿನಿಯೋಗ ಮಾಡುತ್ತಿರುವುದರ ಔಚಿತ್ಯವನ್ನು ಸಾರ್ವಜನಿಕರು ಪ್ರಶ್ನೆ ಮಾಡುತಿದ್ದಾರೆ ಎಂದು ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಮಾಳೇಟಿರ ಎಸ್. ಕಾಳಯ್ಯ ಅವರು ಕೆರೆಗಳ ಕಾಮಗಾರಿಗಳ ಬಗ್ಗೆ ಮಾತನಾಡಿ ಕೆರೆ ನದಿ ಮತ್ತು ಸರೋವರಗಳ ಸಂರಕ್ಷಣೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕರ್ತವ್ಯವಾಗಿದೆ. ಕೆರೆಗಳ ಸುತ್ತಲು ೩೦ ಮೀಟರ್‌ಗಳವರೆಗೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ರಾಷ್ಟಿçÃಯ ಹಸಿರು ನ್ಯಾಯ ಮಂಡಳಿಯ ಅದೇಶವಿದೆ. ಆದರೆ ಗೌರಿಕೆರೆ ಮತ್ತು ಛತ್ರಕೆರೆ ಅಭಿವೃದ್ಧಿಗಾಗಿ ಸುಮಾರು ೧ ಕೋಟಿ ೩೧ ಲಕ್ಷ ರೂ.ಗಳು ವ್ಯಯ ಮಾಡುತ್ತಿದ್ದಾರೆ. ಕಾನೂನು ಅಡಿಯಲ್ಲಿ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆಯೇ ಎಂದು ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರ, ನಗರ ಭೂಸಾರಿಗೆ ನಿರ್ದೇಶನಾಲಯ (ಡಿ.ಯು.ಎಲ್.ಟಿ) ಕಂದಾಯ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಉತ್ತರ ಲಭ್ಯತೆಯ ಮೇರೆಗ ಮುಂದಿನ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವೀರಾಜಪೇಟೆ ನಾಗರಿಕ ಸಮಿತಿಯ ಸದಸ್ಯರಾದ ಎನ್.ಕೆ. ಶರೀಫ್, ಪಿ.ಕೆ. ಅಬ್ದುಲ್ ರೆಹಮಾನ್ ಹಾಜರಿದ್ದರು.