ಸೋಮವಾರಪೇಟೆ, ಫೆ. ೧೦: ಭಾರತೀಯ ಸೇನೆಯಲ್ಲಿ ೧೯ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾಕೇರಿ ಗ್ರಾಮದ ಎಸ್.ಡಿ.ತೇಜ ಅವರನ್ನು ಕಿರಗಂದೂರು ಗ್ರಾಮ ಸಭಾಂಗಣದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.

ತಾಕೇರಿ ಗ್ರಾಮದ ಎಸ್.ಎಸ್.ದೇವಯ್ಯ, ರಾಜಮ್ಮ ದಂಪತಿಯ ಪುತ್ರ ತೇಜ ಅವರು ೨೦೦೬ರಲ್ಲಿ ಭಾರತೀಯ ಸೇನೆಗೆ ಸೇರಿ ಮಹಾರಾಷ್ಟç, ಹರಿಯಾಣ, ಜಮ್ಮುಕಾಶ್ಮೀರ, ಸಿಕಂದರಾಬಾದ್, ರಾಜಸ್ಥಾನ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ತೇಜ ಅವರನ್ನು ಕಿರಗಂದೂರು, ತಾಕೇರಿ, ಬಿಳಿಗೇರಿ ಗ್ರಾಮದ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು. ಕಿರಗಂದೂರು ಗ್ರಾಪಂ ಅಧ್ಯಕ್ಷೆ ತಾರಾ ಸುಧೀರ್, ಮಾಜಿ ಅಧ್ಯಕ್ಷ ಎಸ್.ಕೆ. ರಘು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಎಂ.ಪಿ.ಮುತ್ತಣ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ, ಕಿರಗಂದೂರು ಗ್ರಾ.ಪಂ. ಸದಸ್ಯರಾದ ಎಂ.ಪಿ.ತಿಮ್ಮಯ್ಯ, ಶುಭರಾಣಿ, ಶ್ಯಾಮಲ ಶಿವಕುಮಾರ್, ಮಾಜಿ ಸೈನಿಕ ರಾಜು, ತಾಕೇರಿ ಗ್ರಾಮದ ಎಸ್.ಎಂ.ಚAಗಪ್ಪ ಮತ್ತಿತರರು ಇದ್ದರು.