ನಾಪೋಕ್ಲು, ಫೆ. ೧೦: ಸಮೀಪದ ಚೇರಂಬಾಣೆ ಕೋಪಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ ೧೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಬಿ.ಎನ್. ಜಯಂತಿ ಅವರಿಗೆ ಶಾಲಾ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ೨೯ ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಬಿ ಎನ್ ಜಯಂತಿ ಅವರನ್ನು ಕಾರ್ಯಕ್ರಮದಲ್ಲಿದ್ದ ಗಣ್ಯರು ಗೌರವಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ, ಸದಸ್ಯರಾದ ಮೀನಾಕ್ಷಿ, ಶಾಂತಿ, ನಂದ ಕುಮಾರ್ ಹಾಗೂ ನಿವೃತ್ತ ಶಿಕ್ಷಕಿಯವರಾದ ಡಿ.ಕೆ ಶಾಂತ ಹಾಗೂ ದಾಯನ ಸರೋಜರವರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಿಶಾ ಸೇರಿದಂತೆ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಶಿಕ್ಷಕಿಯವರಾದ ರೇಖಾ ಸ್ವಾಗತಿಸಿ, ನಿವೃತ್ತ ಶಿಕ್ಷಕರ ಕಿರುಪರಿಚಯವನ್ನು ಮಾಡಿ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಎನ್.ಪಿ ಇಂಚರಾ ಮಂದನಾರ್ಪಣೆಯನ್ನು ಮಾಡಿದರು.