ಮುಳ್ಳೂರು, ಫೆ. ೧೨: ಸಮೀಪದ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಸಂಗಯ್ಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಸಮುದಾಯ ಭವನದಲ್ಲಿ ಜನಾಂಗದ ಸಾಂಪ್ರದಾಯಿಕ ಕೆಡ್ಡಸ ಹಬ್ಬವನ್ನು ಆಚರಿಸಲಾಯಿತು.
ಬುಧವಾರ ಕೆಡ್ಡಸ ಹಬ್ಬದ ಪ್ರಾರಂಭದ ದಿನ ಮಹಿಳೆಯರು ಭೂಮಿ ತಾಯಿಯನ್ನು ಪೂಜಿಸುವ ಮೂಲಕ ಸಾಂಪ್ರದಾಯಕವಾಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಗೌರವ ಅಧ್ಯಕ್ಷ ಭಟ್ಯನ ಈರಪ್ಪ, ಸಹ ಕಾರ್ಯದರ್ಶಿ ಪರ್ಲಕೋಟಿ ಶೈಲ ಸತೀಶ್, ನಿರ್ದೇಶಕರಾದ ಕುಯ್ಯಮುಡಿ ಗಣೇಶ್, ಕೋಳಿಬೈಲು ವೆಂಕಟೇಶ್, ಚೀಯಂಡಿ ದೇವಯ್ಯ, ಪರ್ಲಕೋಟಿ ಸತೀಶ್, ಎಡಿಕೇರಿ ಜಯರಾಮ್, ತೊತ್ತಿಯನ ತಾರಾ, ಎಡಿಕೇರಿ ಲೀಲಾವತಿ, ಕೂಡಕಂಡಿ ಚಂದ್ರಮತಿ, ಎಡಿಕೇರಿ ಬೇಬಿ, ಮುಂತಾದವರು ಇದ್ದರು.