ಸೋಮವಾರಪೇಟೆ, ಫೆ. ೧೨: ತಾಲೂಕು ಕಾಫಿ ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತ ಸಂಘ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ, ಕಾರ್ಮಿಕರಿಗೆ ದಿನಗೂಲಿ ನಿಗದಿಪಡಿಸಲಾಗಿದೆ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಡದಂಟೆ ಲವ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕಾಫಿ ತೋಟ ನಿರ್ವಹಣೆ ಸಂಬAಧ ವಿಸ್ತೃತ ಚರ್ಚೆ ನಡೆಸಿ, ಬೆಳೆಗಾರರು ಹಾಗೂ ತೋಟ ಕಾರ್ಮಿಕರು ಹೊಂದಾಣಿಕೆಯಿAದ ಜೀವನ ನಡೆಸಬೇಕು. ಈರ್ವರೂ ಸಹ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಕೃಷಿ ಉಳಿಸಿ, ಬೆಳೆಸಬೇಕಾದರೆ ಸಮನ್ವಯತೆ ಅಗತ್ಯ ಎಂಬುದನ್ನು ಮನಗಂಡು ದಿನಗೂಲಿಯನ್ನು ನಿಗದಿಪಡಿಸಲಾಗಿದೆ ಎಂದರು.
ಇದರೊAದಿಗೆ ಎಲ್ಲಾ ತೋಟ ಮಾಲೀಕರು ಇದೇ ಸಮಯವನ್ನು ನಿಗದಿಪಡಿಸಬೇಕು. ಕಾರ್ಮಿಕರಿಗೆ ನೀಡುವ ವೇತನ ಎಲ್ಲಾ ಕಡೆಗಳಲ್ಲೂ ಒಂದೇ ರೀತಿಯಾಗಿರಬೇಕು. ಕಾರ್ಮಿಕರು ಹಾಗೂ ಬೆಳೆಗಾರರು ಈ ನಿರ್ಧಾರಕ್ಕೆ ಬದ್ಧರಾಗಿರಬೇಕೆಂದು ಲವ ಮನವಿ ಮಾಡಿದರು.
ಪ್ರಸ್ತುತ ಕಾಫಿಗೆ ಉತ್ತಮ ಬೆಲೆ ಇದ್ದರೂ ಇಳುವರಿ ಕಡಿಮೆಯಿದೆ. ಈಗ ನೀಡುತ್ತಿರುವ ದುಬಾರಿ ಕೂಲಿಯನ್ನು ಮುಂದಿನ ದಿನಗಳಲ್ಲಿ ನೀಡುವುದು ಅಸಾಧ್ಯವಾಗಲಿದೆ. ಈಗ ಹೆಚ್ಚು ಕೂಲಿ ನೀಡಿದರೆ ಕಾಫಿಗೆ ೧೩ ಸಾವಿರ ಬೆಲೆ ಬಂದರೂ ಸಹ ಹೆಚ್ಚಿನ ಕೂಲಿಯನ್ನೇ ನೀಡಬೇಕಾಗುತ್ತದೆ. ಈ ಬಗ್ಗೆ ಬೆಳೆಗಾರರು ಚಿಂತನೆಹರಿಸಬೇಕಿದೆ ಎಂದು ಗೋಷ್ಠಿಯಲ್ಲಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಹೇಳಿದರು.
ಬೆಳೆಗಾರರ ಸಂಘದ ಉಪಾಧ್ಯಕ್ಷ ಗೌಡಳ್ಳಿ ಪ್ರಸ್ಸಿ ಮಾತನಾಡಿ, ಕಾಫಿ ತೋಟದ ಕೆಲಸಕ್ಕೆಂದು ಲೈನ್ ಮನೆಗಳಿಗೆ ಬಂದ ಅಸ್ಸಾಮಿಗರು ಇದೀಗ ಪಟ್ಟಣಗಳಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದಾರೆ. ತೋಟದ ಲೈನ್‌ಮನೆಗಳು ಖಾಲಿಬಿದ್ದಿವೆ. ಪಟ್ಟಣದಲ್ಲಿ ಇವರುಗಳಿಂದ ದಿನಕ್ಕೊಂದು ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ಹಿನ್ನೆಲೆ ಇವರುಗಳಿಗೆ ಪಟ್ಟಣದಲ್ಲಿ ಆಶ್ರಯ ನೀಡದೇ ತೋಟದ ಮನೆಗಳಿಗೆ ಕಳಿಸಬೇಕು. ಅಲ್ಲಿನ ಮಾಲೀಕರು ಇವರುಗಳ ಪೂರ್ವಾಪರ ವಿಚಾರಿಸಿ, ಠಾಣೆಗೆ ಮಾಹಿತಿ ನೀಡಿ ತೋಟ ಕೆಲಸಕ್ಕೆ ನಿಯೋಜಿಸಬೇಕೆಂದು ಮನವಿ ಮಾಡಿದರು.
ರೈತ ಸಂಘದ ಕಾರ್ಯದರ್ಶಿ ರಾಜಪ್ಪ ಮಾತನಾಡಿ, ಬೆಳೆಗಾರರ ಸಂಘದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಎಲ್ಲಾ ತೋಟ ಮಾಲೀಕರು ಬದ್ಧರಾಗಿರಬೇಕು. ಒಂದು ವೇಳೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೂಲಿ ನೀಡುವುದು ಕಂಡುಬAದರೆ, ಅಂತಹ ಮಾಲೀಕರ ಮನೆಗಳ ಎದುರು ಸಂಘದ ಸದಸ್ಯರುಗಳು ತೆರಳಿ ವಿರೋಧಿಸುವ ಕೆಲಸ ಮಾಡಲಾಗುವುದು ಎಂದರು.
ಕಾಫಿ ಬೆಳೆಗಾರರಿಗೂ ೧೦ ಹೆಚ್‌ಪಿ ವರೆಗೆ ಉಚಿತ ವಿದ್ಯುತ್ ನೀಡುವಂತೆ ಈ ಹಿಂದಿನಿAದಲೂ ಆಗ್ರಹಿಸುತ್ತಲೇ ಬರಲಾಗಿದೆ. ಇದೀಗ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವ ಬಗ್ಗೆ ಸೆಸ್ಕ್ನಿಂದ ಪತ್ರ ಬರುತ್ತಿದೆ. ಬೆಳೆಗಾರರು ಬಡ್ಡಿ ಇರಲಿ; ಅಸಲನ್ನೂ ಕಟ್ಟಲು ಶಕ್ತರಾಗಿಲ್ಲ. ಈ ಹಿನ್ನೆಲೆ ಹಿಂದಿನ ಎಲ್ಲಾ ವಿದ್ಯುತ್ ಬಿಲ್ ಮನ್ನಾ ಮಾಡಿ, ಕೃಷಿಗೆ ಉಚಿತ ವಿದ್ಯುತ್ ನೀಡಬೇಕು. ಬೇಸಿಗೆ ಸಮಯದಲ್ಲಿ ತೋಟಕ್ಕೆ ನೀರು ಹಾಯಿಸಬೇಕಿದ್ದು, ನÀಂತರ ವಿದ್ಯುತ್ ಒದಗಿಸಲು ಸೆಸ್ಕ್ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ರೈತಪರ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತಾಕೇರಿ ಮಹೇಶ್ ಉಪಸ್ಥಿತರಿದ್ದರು.