ಚೆಯ್ಯಂಡಾಣೆ, ಫೆ. ೧೧: ಎಲ್ಲಾ ಧರ್ಮದವರು ಪರಸ್ಪರ ಶಾಂತಿ ಸೌಹಾರ್ದತೆಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಮಾತ್ರ ಗ್ರಾಮದಲ್ಲಿ ಸಾಮರಸ್ಯ ಬೆಸೆಯಲು ಸಾಧ್ಯ ಎಂದು ಕಕ್ಕಬ್ಬೆ ಸಮೀಪದ ಕುಂಜಿಲ ಪೈನರಿ ದರ್ಗಾದ ವಾರ್ಷಿಕ ಉರೂಸ್ ಸಮಾರಂಭದ ಸಾರ್ವಜನಿಕ ಸೌಹಾರ್ದ ಸಮ್ಮೇಳನದಲ್ಲಿ ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಕ್ಕಬ್ಬೆಯ ಶ್ರೀ ಭಗವತಿ ದೇವಸ್ಥಾನದ ದೇವತಕ್ಕರಾದ ಪಾಂಡAಡ ನರೇಶ್ ಅವರು ಪಾಲ್ಗೊಂಡು ಮಾತನಾಡಿ, ಪೈನರಿ ಮಸೀದಿ ನಾಡಿಗೆ ಅವಿಭಾಜ್ಯ ಅಂಗವಾಗಿದೆ, ನಮ್ಮ ಗ್ರಾಮದ ಜನರ ಹಸುಗಳಿಗೆ ಏನಾದರೂ ತೊಂದರೆ ಆದರೆ ಕೂಡಲೇ ನಾವು ಫೈನರಿ ದರ್ಗಾದಲ್ಲಿ ಹರಕೆ ಮಾಡುತ್ತೇವೆ.

ಹರಕೆ ಮಾಡಿದ ತಕ್ಷಣ ಹಸುಗಳ ರೋಗಗಳು ನಿವಾರಣೆಯಾಗುತ್ತಿದೆ. ಇದೊಂದು ಪವಿತ್ರವಾದ ಸ್ಥಳ ಇಲ್ಲಿ ಎಲ್ಲಾ ಜನಾಂಗದವರು ಭಾಗವಹಿಸುತ್ತಾರೆ. ದೇವರೆಲ್ಲರೂ ಒಂದೇ ಆಚಾರ ಮಾಡುವ ರೀತಿ ಮಾತ್ರ ಬೇರೆ ಎಂದ ಅವರು ಎಲ್ಲರೂ ಸೇರಿ ಒಗ್ಗಟ್ಟಾದರೆ ಗ್ರಾಮ ಉತ್ತಮವಾಗಲಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮತ್ತೋರ್ವ ಮುಖ್ಯ ಅತಿಥಿ ಕಾಫಿ ಬೆಳೆಗಾರ ಮಲ್ಲಚಂಡ ಚೇತನ್ ಮಾತನಾಡಿ, ಪೈನರಿ ಮಸೀದಿ ಎಂದರೆ ಪೈಯ್ ಮತ್ತು ನರಿ ಒಂದೇ ಸ್ಥಳದಲ್ಲಿ ಮಲಗಿದ್ದಂತಹ ಸ್ಥಳ ಈ ಜಾಗ ಪಾವಿತ್ರತೆ ಇರುವ ಜಾಗ, ಇಲ್ಲಿ ನಮ್ಮ ಜನಾಂಗ ಹಾಗೂ ಮುಸ್ಲಿಂ ಬಾಂಧವರು ಶಾಂತಿಯ ತೋಟದ ತರ ನಡೆದುಕೊಳ್ಳುತ್ತಿದ್ದೇವೆ. ಇನ್ನು ಮುಂದಕ್ಕೂ ಇದೇ ರೀತಿ ನಡೆಯಲಿ ಎಂದರು.

ಬಾಚಮAಡ ರಾಜ ಪೂವಣ್ಣ ಮಾತನಾಡಿ, ಹಲವಾರು ವರ್ಷಗಳಿಂದ ಇಲ್ಲಿನ ರಸ್ತೆ ಅಭಿವೃದ್ಧಿ ಕಾಣುತ್ತಿರಲಿಲ್ಲ ಶಾಸಕರನ್ನು ನಿರಂತರ ಸಂಪರ್ಕಿಸಿ ಈ ವರ್ಷ ಉರೂಸ್ ಮುಂಚಿತವಾಗಿ ನಮ್ಮ ರಸ್ತೆ ಅಭಿವೃದ್ಧಿ ಕಂಡಿದೆ. ಇಲ್ಲಿ ನಾವು ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ ಎಂದರು.

ಉರೂಸ್ ಸಮಾರಂಭದಲ್ಲಿ ಕೇರಳದ ವಾಗ್ಮಿ ಹಾಫೀಝ್ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಮುಖ್ಯಭಾಷಣ ಮಾಡಿದರು.

ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಶೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪೈನರಿ ಮಸೀದಿಯ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಉದ್ಘಾಟಿಸಿ ಮಾತನಾಡಿ, ಸೌಹಾರ್ದತೆಗೆ ಸಾಕ್ಷಿಯಾದ ಈ ಪೈನರಿ ದರ್ಗಾ ವಿಶೇಷತೆ ಹೊಂದಿದೆ. ಇಲ್ಲಿ ಸರ್ವಧರ್ಮದವರು ಭಾಗವಹಿಸಿ ಉರೂಸ್ ಆಚರಣೆಗೊಳಿಸುತ್ತಿರುವುದು ಸಂತಷ ತರುತ್ತಿದೆ ಎಂದರು.

ವೇದಿಕೆಯಲ್ಲಿ ತಕ್ಕಿಯುದ್ದೀನ್ ಜೀಲಾನಿ ತಂಙಳ್ ಲಕ್ಷದ್ವೀಪ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಕೆಎಂಜೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಕೋಶಾಧಿಕಾರಿ ಕುಂಡAಡ ಹಂಝ, ದರ್ಸ್ ಸಮಿತಿಯ ಅಧ್ಯಕ್ಷ ಹಂಝ ತರಮೇಲ್, ಕಡಂಗ ಬದ್ರಿಯಾ ಜಮಾಅತ್ ಅಧ್ಯಕ್ಷ ಉಸ್ಮಾನ್, ಮೊಯ್ಯದ್ದೀನ್ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಜಮಾಅತ್ ಬೆಂಗಳೂರು ಸಮಿತಿಯ ಅಧ್ಯಕ್ಷ ವಯಕೋಲ್ ರಶೀದ್, ಉದಿಯಂಡ ಸುಭಾಷ್, ಗ್ರಾಮ ಪಂಚಾಯಿತಿ ಸದಸ್ಯರಾದ ಕುಂಡAಡ ರಝಾಕ್, ಬಶೀರ್ ಪೊಯಕ್ಕರೆ, ಶಾಫಿ ಎಡಪಾಲ, ಮೊಯಿದ್ದೀನ್ ಕುಂಞ ಬಾಳುಗೋಡು, ಅಬ್ದುಲ್ ರಹ್ಮನ್ ಹಾಜಿ, ಮೊಹಮ್ಮದ್ ಹಾಜಿ, ಹುಸೈನ್ ಹಾಜಿ, ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ದುಬೈ ಪ್ರಧಾನ ಕಾರ್ಯದರ್ಶಿ ರಫೀಕ್ ಅಲಿ ಕುಂಡAಡ, ಜಮಾಅತ್ ಪದಾಧಿಕಾರಿಗಳು, ದರ್ಸ್ ಸಮಿತಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದ ಪ್ರಯುಕ್ತ ಸಂಜೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ರಾತ್ರಿ ಸೌತ್ ಆಫ್ರಿಕಾದ ಬರಾಕಾತಿ ಬುರ್ದಾ ತಂಡದಿAದ ಪ್ರಖ್ಯಾತಿ ಪಡೆದ ಬುರ್ದಾ ಅಲಾಪನೆ ನಡೆಯಿತು.

ಮೊದಲಿಗೆ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಪ್ರಾರ್ಥಿಸಿ, ಸಿರಾಜ್ ವಯಕೋಲ್ ಸ್ವಾಗತಿಸಿ, ಸಹೀದ್ ಪಯ್ಯಡತ್ ವಂದಿಸಿದರು.ವಿವಿಧ ಜಾತಿ, ಧರ್ಮಗಳ ಸಮ್ಮಿಲನವಾಗಿರುವ ಭಾರತದ ಬಹುತ್ವವನ್ನು ಬಿಂಬಿಸುವ ಕಾರ್ಯಕ್ರಮ ಉರೂಸ್ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ನಾಪೋಕ್ಲು ಬಳಿಯ ಕುಂಜಿಲ ಪೈನರಿ ದರ್ಗಾದ ವಾರ್ಷಿಕ ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಲ್ಲಿನ ಅಂಜಪರವAಡ ಕುಟುಂಬಸ್ಥರು ಅಕ್ಕಿಯನ್ನು ನೀಡುವ ಮೂಲಕ ಉರೂಸ್ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂಬುದು ಸೌಹಾರ್ದತೆಗೆ ಸಾಕ್ಷಿ.

ತಮ್ಮ ಧರ್ಮ, ಅದರ ಪಾಲನೆ ಮತ್ತು ಆಚರಣೆಯನ್ನು ಎಲ್ಲರೂ ಕೂಡ ಸ್ವಾಗತಿಸಬೇಕು. ಅದನ್ನು ಸುಭದ್ರವಾಗಿ ನಡೆಯಲಿಕ್ಕೆ ಬಿಡಬೇಕು ಅನ್ನುವಂತದ್ದೇ ಈ ದೇಶದ ಮೂಲಉದ್ದೇಶ ಎಂದ ಅವರು, ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯಾದ್ಯಂತ ಹಲವಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನ್ಯಾಯ ಒದಗಿಸುವಂತಹ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ವೀರಾಜಪೇಟೆ ಕ್ಷೇತ್ರದಲ್ಲಿ ಕೂಡ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಹಲವು ಕಾಮಗಾರಿಗಳು ಮುಕ್ತಾಯ ಕೂಡ ಆಗಿವೆ. ಕುಂಜಿಲ ವ್ಯಾಪ್ತಿಯ ರಸ್ತೆ ಹಾಗೂ ವಿವಿಧ ಕಾಮಗಾರಿಗಳು ನಡೆದಿವೆ ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಧರ್ಮವೆಂಬ ವ್ಯತ್ಯಾಸವಿಲ್ಲದೆ ನಾವೆಲ್ಲ ಒಗ್ಗಟ್ಟಿನಿಂದ ಮನುಷ್ಯ ಜೀವಿಗಳೆಂಬ ಆಶಯದಲ್ಲಿ ಬದುಕಬೇಕೆಂಬುದೇ ಎಲ್ಲಾ ಧರ್ಮಗಳ ಸಾರವಾಗಿದೆ. ನಾವೆಲ್ಲರೂ ಸೇರಿ ಒಗ್ಗಟ್ಟಿನಲ್ಲಿ ಗ್ರಾಮ, ಜಿಲ್ಲೆ, ರಾಜ್ಯ ದೇಶದಲ್ಲಿ ನಾವೆಲ್ಲ ಸಹೋದರತೆಯಿಂದ ಒಗ್ಗಟ್ಟಾಗಿ ಬಾಳೋಣ ಎಂದರು.

ಈ ಸಂದರ್ಭ ಕುಂಜಿಲ ಪೈನರಿ ಜಮಾಅತ್ ಅಧ್ಯಕ್ಷ ಸೌಕತ್ ಅಲಿ, ವೀರಾಜಪೇಟೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ವೀರಾಜಪೇಟೆ ಪುರಸಭೆ ಸದಸ್ಯ ಮೊಹಮ್ಮದ್ ರಾಫಿ, ಪಪ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ, ಗ್ರಾಮ ಪಂಚಾಯಿತಿ ಸದಸ್ಯರು, ಜಮಾಅತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.