ಐಗೂರು, ಫೆ. ೧೨: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆಯಲ್ಲಿ, ಅರೆಭಾಷೆ ಗೌಡ ಸಮಾಜದ ನೂತನ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನಡೆಯಿತು. ಅರ್ಚಕ ಜಯಂತ್ ಭಟ್ ವಿವಿಧ ಪೂಜಾ ಕೈಂಕರ್ಯಗಳನ್ನು ಮುಗಿಸಿದ ನಂತರ, ಸಮಾಜದ ಅಧ್ಯಕ್ಷ ಬಾರನ ಭರತ್ ಕುಮಾರ್ ನೇತೃತ್ವದಲ್ಲಿ, ಸಮಾಜದ ಗೌರವಾಧ್ಯಕ್ಷರೂ, ಕಾನೂನು ಸಲಹೆಗಾರ ಪೊನ್ನಚ್ಚನ ಗಣಪತಿ ದಂಪತಿ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಂಗಾರು ಗಿರೀಶ್, ಪೊನ್ನಚ್ಚನ ತೇಜಕುಮಾರ್, ಕೂಡಕಂಡಿ ಧೀರಜ್, ಬಾರನ ಪ್ರಮೋದ್, ತೆಕ್ಕಡೆ ಸಂದೇಶ, ಚೆರಿಯಮನೆ ವಿನೋದ್, ದೊಡ್ಡಮನೆ ಕೃಷ್ಣಪ್ಪ, ಪಳಂಗೋಟು ನಾಗೇಶ, ಕಡ್ಲೆರ ಶೋಭಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.