ಮುಳ್ಳೂರು, ಫೆ. ೧೨: ಸಮೀಪದ ಆಲೂರು-ಸಿದ್ದಾಪುರದಲ್ಲಿ ಒಬ್ಬರು ಬೃಹತ್ ಗಾತ್ರದ ನಾಗರ ಹಾವನ್ನು ಹಿಡಿದು ಚೀಲದಲ್ಲಿ ತುಂಬಿಸಿ ಅದನ್ನು ಕಾಡಿಗೆ ಬಿಟ್ಟಿದ್ದಾರೆ.

ಮಂಗಳವಾರ ಮಧ್ಯಾಹ್ನ ಆಲೂರು-ಸಿದ್ದಾಪುರದ ಕೆನರಾ ಬ್ಯಾಂಕ್ ಬಳಿ ಖಾಸಗಿ ವ್ಯಕ್ತಿಯೊಬ್ಬರ ಕಾಮಗಾರಿ ನಡೆಯುತ್ತಿದ್ದ ಮನೆಯಲ್ಲಿ ಬೃಹತ್ ಗಾತ್ರದ ನಾಗರ ಹಾವು ಸೇರಿಕೊಂಡಿತು. ಹೆಡೆಬಿಚ್ಚಿ ಬುಸುಗುಡುವುದನ್ನು ಕಂಡ ಜನರು ಭಯಭೀತರಾದರು. ಹಾವು ಸೇರಿಕೊಂಡಿರುವ ಮಾಹಿತಿ ತಿಳಿದ ಆಲೂರು-ಸಿದ್ದಾಪುರ ನಿವಾಸಿ ತೇನನ ಸಾಬು ಎಂಬವರು ಸ್ಥಳಕ್ಕೆ ಬಂದು ನಾಗರ ಹಾವನ್ನು ಹಿಡಿದು ಅದನ್ನು ಚೀಲದಲ್ಲಿ ತುಂಬಿ ಪಕ್ಕದ ಬಾಣವಾರ ಮೀಸಲು ಅರಣ್ಯದೊಳಗೆ ಬಿಟ್ಟಿದ್ದಾರೆ.