ನಾಪೋಕ್ಲು, ಫೆ. ೧೨: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಗಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಪಟಾಕಿ ಸಿಡಿಸಿದ ಕಾರ್ಯ ಕರ್ತರು ಪಕ್ಷದ ಬಾವುಟವನ್ನು ಹಿಡಿದು ಘೋಷಣೆಯನ್ನು ಮೊಳಗಿಸಿ ಸಂಭ್ರಮಿಸಿದರು.

ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪನವರ ಮುಂದಾಳತ್ವದಲ್ಲಿ ಜರುಗಿದ ವಿಜಯೋತ್ಸವದಲ್ಲಿ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಪ್ರತೀಪ, ಬಿಜೆಪಿ ಪಕ್ಷದ ಪ್ರಮುಖರಾದ ಕೇಟೋಳಿರ ಹರೀಶ್ ಪೂವಯ್ಯ, ಶಿವಚಾಳಿಯಂಡ ಜಗದೀಶ್, ನರೇಂದ್ರ ಎಂ.ಎA., ಅಪ್ಪಚ್ಚಿರ ರಮ್ಮಿ ನಾಣಯ್ಯ, ಅರೆಯಡ ರತ್ನ ಪೆಮ್ಮಯ್ಯ, ಟಿ.ಎ. ಮಿಟ್ಟು, ನಾಯಕಂಡ ದೀಪು, ಪಟ್ರಪಂಡ ನಿರನ್, ಕಂಗಾAಡ ಜಾಲಿ ಪೂವಪ್ಪ, ಚಿಯಕ್‌ಪೂವಂಡ ರಘು, ಪೊರ್ಕೊಂಡ ಅನಿಲ್, ಬಿದ್ದಾಟಂಡ ಸಂಪತ್, ಕೇಟೋಳಿರ ಫಿರೋಜ್ ಗಣಪತಿ, ಕರ್ತಮಾಡ ಡಿಲನ್, ಕಸ್ತೂರಿ, ಬಿ.ಕೆ. ಪೂವಿ, ನಂಜಪ್ಪ, ಪುತ್ರ ತಿಮ್ಮಯ್ಯ, ಪೂವಯ್ಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.