ಮಡಿಕೇರಿ, ಫೆ. ೧೧: ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ೩೮ನೇ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಕೊಡಗಿನ ಮೂಲದ ಟೆನ್ನಿಸ್ ಪಟು ಕಲಿಯಂಡ ನಿಕಿ ಪೂಣಚ್ಚ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕದ ಮೂಲಕ ರಾಜ್ಯಕ್ಕೆ ಗೌರವ ತಂದಿದ್ದಾರೆ. ಡಬಲ್ಸ್ನಲ್ಲಿ ಚಿನ್ನ, ಮಿಕ್ಸೆಡ್ ಡಬಲ್ಸ್ ಹಾಗೂ ಟೀ ಈವೆಂಟ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಇವರದ್ದಾಗಿದೆ.

ಡಬಲ್ಸ್ನಲ್ಲಿ ತಮ್ಮ ಜೋಡಿ ಎಸ್.ಡಿ. ಪ್ರಜ್ವಲ್ ದೇವ್ ಜತೆ ಚಿನ್ನದ ಪದಕ, ಮಿಕ್ಸೆಡ್ ಡಬಲ್ಸ್ನಲ್ಲಿ ಸೋಹಾ ಸಾದಿಕ್ ಜತೆ ಬೆಳ್ಳಿ ಮತ್ತು ಟೀ ಈವೆಂಟ್‌ನಲ್ಲಿ ನಿಕಿ ಪೂಣಚ್ಚ, ಪ್ರಜ್ವಲ್ ದೇವ್, ಆದಿಕಲ್ಯಾಣ್‌ಪುರ್, ರಿಷಿ ರೆಡ್ಡಿ ಹಾಗೂ ಮನೀಷ್ ಅವರುಗಳನ್ನು ಒಳಗೊಂಡ ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ. ಕಲಿಯಂಡ ನಿಕಿ ಪೂಣಚ್ಚ ಮೂಲತಃ ನಾಪೋಕ್ಲು ವಿಭಾಗದವರಾಗಿದ್ದು, ಟೆನ್ನಿಸ್‌ನಲ್ಲಿ ಸಾಧನೆ ತೋರುತ್ತಿದ್ದಾರೆ.