ವೀರಾಜಪೇಟೆ, ಫೆ. ೧೧: ವೀರಾಜಪೇಟೆಯ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಮೂಹದ ಸಂಘನಾಧಿಕಾರಿಯಾಗಿ ಹನೂರಿಗೆ ವರ್ಗಾವಣೆಗೊಂಡ ಎ. ಚಂದ್ರ ಕುಮಾರ್ ಅವರಿಗೆ ವೀರಾಜಪೇಟೆ ಪುರಸಭೆ ವತಿಯಿಂದ ಬೀಳ್ಕೊಡುಗೆ ಹಮ್ಮಿಕೊಳ್ಳಲಾಗಿತ್ತು.

ವೀರಾಜಪೇಟೆ ಪುರಸಭೆಗೆ ಕಳೆದ ಮೂರೂವರೆ ವರ್ಷಗಳ ಹಿಂದೆ ಮುಖ್ಯಾಧಿಕಾರಿಯಾಗಿ ಆಗಮಿಸಿ ಇವರು ಈತನಕ ಕಾರ್ಯ ನಿರ್ವಹಿಸಿದ್ದರು. ವೀರಾಜಪೇಟೆ ಪುರಸಭೆ ಸದಸ್ಯರು, ಚಂದ್ರಕುಮಾರ್ ಅವರ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ತಹಶೀಲ್ದಾರ್ ರಾಮಚಂದ್ರ ಆಗಮಿಸಿದ್ದು, ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರ ಕುಮಾರ್, ಜಿಲ್ಲಾಡಳಿತ, ಪುರಸಭೆ ಆಡಳಿತ ಮತ್ತು ಸಾರ್ವಜನಿಕ, ಮೂವರ ನಡುವಿನ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಇರುತ್ತದೆ. ಅಲ್ಲದೆ ಅನೇಕ ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಜವಾಬ್ದಾರಿ ಕೂಡ ಇರುತ್ತದೆ. ವೀರಾಜಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಗೌರಿ ಗಣೇಶ ಉತ್ಸವದ ಸಂದರ್ಭದಲ್ಲಿ ಮೂರು ವರ್ಷದ ಅನುಭವವನ್ನು ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಉಪಾಧ್ಯಕ್ಷೆ ಫಸಿಹಾ ತಭಸುಂ ಸೇರಿದಂತೆ ಪುರಸಭೆ ಕಚೇರಿಯ ಸಿಬ್ಬಂದಿಗಳು, ಪೌರ ಕಾರ್ಮಿಕರು ಹಾಜರಿದ್ದರು.