ಮಡಿಕೇರಿ, ಫೆ. ೧೨ : ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು (ಮಡಿಕೇರಿ ತಾಲೂಕಿನ ಕಸಬಾ ಹೋಬಳಿಯ ೮ ಪಂಚಾಯಿತಿ ವ್ಯಾಪ್ತಿಗೆ ಸೀಮಿತಗೊಂಡAತೆ) ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಲಾಗಿದೆ.
ಅಧ್ಯಕ್ಷರಾಗಿ ಕ್ಷೇತ್ರ ಶಾಸಕ ಡಾ ಮಂತರ್‌ಗೌಡ ಅವರಿರುತ್ತಾರೆ.
ಸದಸ್ಯರುಗಳಾಗಿ ಪಾಪು ಸಣ್ಣಯ್ಯ, ಸೊಡ್ಲೂರು, ಮಡಿಕೇರಿ ತಾಲೂಕು, ಪಾಲೆಯಂಡ ರೂಪಾ ಸುಬ್ಬಯ್ಯ ಹಾಗೂ ೧ನೇ ಮೊಣ್ಣಂಗೇರಿ, ಗಾಳಿಬೀಡಿನ ಹರಿಪ್ರಸಾದ್ ಕೆ.ಕೆ. ನೇಮಕಗೊಂಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯ (ಭೂ ಮಂಜೂರಾತಿ+೨) ಪೀಠಾಧಿಕಾರಿ ಮುತ್ತುರಾಜ್ ಎಂ.ಎನ್. ಅವರು ಆದೇಶ ಹೊರಡಿಸಿದ್ದಾರೆ.