ಐಗೂರು, ಫೆ. ೧೧: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಐಡಿಹೆಚ್ ಸಂಸ್ಥೆ ಮತ್ತು ಹಿಂದುಸ್ತಾನ್ ಯೂನಿಲಿವರ್ ಸಹಯೋಗದೊಂದಿಗೆ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಐಸಿಆರ್‌ಎಲ್ ಜಿಲ್ಲಾ ಸಂಯೋಜಕ ಸುರೇಶ್ ಬೆಳಗಾರರಿಗೆ ಜಾಗೃತಿ ಮೂಡಿಸುವ ಮಣ್ಣಿನ ಆರೋಗ್ಯ, ನೀರಿನ ಬಳಕೆ , ಹವಾಮಾನ ಪುನಶ್ಚೇತನ ಆಧಾರಿತ ಕೃಷಿ, ಜೀವ ವೈವಿಧ್ಯ ಮತ್ತು ಕೃಷಿಯಲ್ಲಿ ಉಪಕಸಬು ಎಂಬ ಐದು ಅಂಶಗಳ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಫಿ ಮಂಡಳಿ ಅಧಿಕಾರಿ ಲಕ್ಷಿö್ಮÃಶ ಅವರು ಬೆಳೆಗಾರರಿಗೆ ನೀರು ಮತ್ತು ಮಣ್ಣು ನಿರ್ವಹಣೆ ಬಗ್ಗೆ ತರಬೇತಿ ನೀಡಿದರು. ಈ ಸಂದರ್ಭ ಬೆರಿ ಬೋರರ್ ನಿಯಂತ್ರಣ ಮತ್ತು ಪಾರ್ಮರ್ ಚಾಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಯಿತು.

ರೈತರಿಗೆ ಬೋರರ್ ಹುಳಗಳನ್ನು ನಾಶಪಡಿಸುವ ಔಷಧಗಳಿರುವ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸತೀಶ, ಮೋಹನ ಸ್ವಾಮಿ, ಎಂ.ಬಿ. ರಮೇಶ್, ರೋಶನ್, ನಾಗಂಡ ದೇವಿ, ಕೊಪ್ಪತಂಡ ಗಣೇಶ್, ರೂಪೇಶ್, ಸುಬ್ರಮಣಿ ಭಾಗವಹಿಸಿದ್ದರು.